ಲಂಡನ್: ಐಸಿಸ್ ಉಗ್ರರ ಇತ್ತಿಚೆಗಷ್ಟೇ ಬಿಡುಗಡೆಗೊಂಡ ಯಾಜಾದಿ ಯುವತಿಯೊಬ್ಬಳು ಅಲ್ಲಿನ ತನ್ನ ಕರಾಳ ಅನುಭವಗಳನ್ನು ಬಿಚ್ಚಿಟ್ಟಿದ್ದು, ಯುವತಿಯರ ಮೇಲೆ ಉಗ್ರರ ಅಮಾನವೀಯ ವರ್ತನೆಯ ಮತ್ತೊಂದು ಮುಖ ಬಹಿರಂಗಗೊಂಡಿದೆ.
ಇಸಿಸ್ ಉಗ್ರರು ಯಾಜಿದಿ ಮಹಿಳೆಯರನ್ನು ಹರಾಜಿನಲ್ಲಿ ಕೊಂಡುಕೊಳ್ಳುತ್ತಿದ್ದರು. ಇದೇ ರೀತಿ ನನ್ನ ಮತ್ತು ತಂಗಿಯನ್ನು ಹರಾಜಿನಲ್ಲಿ ಅಲ್ ರಷಿಯಾ ಎಂಬ ಉಗ್ರ ಖರೀದಿಸಿದ್ದನು. ಎಲ್ಲ ಯುವತಿಯರನ್ನು ಪ್ರತಿನಿತ್ಯವೂ ಬೆತ್ತಲೆಗೊಳಿಸಿ, ಅವರನ್ನು ಮೂಸಿ ನೋಡುವ ಮೂಲಕ ಯಾವ ಯುವತಿಯ ಜೊತೆ ತಾನು ಅಂದು ಲೈಂಗಿಕ ಕ್ರಿಯೆ ನಡೆಸಬೇಕೆಂಬುದನ್ನು ನಿರ್ಧರಿಸುತ್ತಿದ್ದ ಎಂದು ಉಗ್ರರಿಂದ ಬಿಡುಗಡೆಗೊಂಡ ಯುವತಿ ಹೇಳಿದ್ದಾರೆ.
ಅಲ್ಲಿ ತಮಗೆ ಪ್ರತಿ ದಿನವೂ ಸಾವಿನ ದರ್ಶನವಾಗುತ್ತಿತ್ತು. ತನ್ನ 10 ವರ್ಷದ ಸಹೋದರಿಯೂ ತನ್ನೊಂದಿಗೆ ಹರಾಜಾಗಿದ್ದಳು. ಪ್ರತಿ ನಿತ್ಯವೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಉಗ್ರರು ಮನಬಂದಂತೆ ಥಳಿಸುತ್ತಿದ್ದರು ಎಂದು ತನ್ನ ಕರಾಳ ಕಥೆಯನ್ನು ಸುದ್ದಿ ಸಂಸ್ಥೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.
ಈಗ ಮೂರು ತಿಂಗಳ ಗರ್ಭಿಣಿಯಾಗಿರುವ 17 ವರ್ಷದ ಈ ಯುವತಿ, ಕನ್ಯತ್ವ ಪರೀಕ್ಷೆ ನಡೆಸಿದ ಬಳಿಕ ತಮ್ಮನ್ನು ಹರಾಜು ಮಾಡಲಾಯಿತು. ತಮ್ಮನ್ನು ಕೊಂಡುಕೊಂಡ ಉಗ್ರರು ಮನುಷ್ಯತ್ವವೇ ಇಲ್ಲದ ಕ್ರೂರಿಗಳು ಎಂದು ಹೇಳಿದ್ದಾಳಲ್ಲದೇ ಅವರೊಂದಿಗೆ ಸಹಕರಿಸದಿದ್ದರೆ ಮೈ ಮೇಲೆ ಕುದಿಯುವ ನೀರನ್ನು ಸುರಿಯುತ್ತಿದ್ದರು ಎಂದ ಸತ್ಯವನ್ನು ಹೊರ ಹಾಕಿದ್ದಾಳೆ.