ಅಂತರಾಷ್ಟ್ರೀಯ

ಪ್ರೀತಿಯ ನಾಯಿಗಾಗಿ ಬಂಗಾರದ ವಾಚ್ ಖರೀದಿಸಿದ ಭೂಪ..!

Pinterest LinkedIn Tumblr

1117340531-apple-watchdogappleinsider2

ಚೀನಾ: ಅತಿ ದೊಡ್ಡ ಶ್ರೀಮಂತ ವ್ಯಕ್ತಿಯ ಪುತ್ರನೊಬ್ಬ ತನ್ನ ಪ್ರೀತಿಯ ನಾಯಿಗಾಗಿ ಎರಡು ಬಂಗಾರದ ಆ್ಯಪಲ್ ವಾಚ್ ಗಳನ್ನು ಖರೀದಿಸಿದ್ದಾನಲ್ಲದೇ ಇವುಗಳನ್ನು ನಾಯಿಯ ಮುಂಗಾಲಿಗೆ ಕಟ್ಟಿ ಹಿಂಗಾಲಿಗಾಗಿ ಇನ್ನೆರೆಡು ವಾಚುಗಳನ್ನು ಶೀಘ್ರದಲ್ಲೇ ಖರೀದಿಸುವುದಾಗಿ ಘೋಷಿಸಿದ್ದಾನೆ.

ಚೀನಾದಂತಹ ಕಮ್ಯುನಿಸ್ಟ್ ರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ಬಂಗಾರದ ಆ್ಯಪಲ್ ವಾಚುಗಳನ್ನು ನಾಯಿಗೆ ಕಟ್ಟಿ ಅದರ ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವುದರ ಕುರಿತು ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಚೀನಾದ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ ದಾಲಿಯನ್ ವಾಂಡಾ ಗ್ರೂಪ್ ಮಾಲೀಕ ವಾಂಗ್ ಜಿಂಗ್ಲಿಂಗ್ ಅವರ ಪುತ್ರ 27 ವರ್ಷದ ವಾಂಗ್ ಸಿಕಾಂಗ್ ಎಂಬಾತನೇ ನಾಯಿಗಾಗಿ ವಾಚ್ ಖರೀದಿಸಿದ ಭೂಪನಾಗಿದ್ದಾನೆ.

ಈ ಬಂಗಾರದ ಆ್ಯಪಲ್ ವಾಚುಗಳ ಬೆಲೆ 10,000 ದಿಂದ 17,000 ಡಾಲರ್ ವರೆಗೆ ಇದೆ ಎನ್ನಲಾಗಿದ್ದು, ತನ್ನ ಶೋಕಿಗಾಗಿ ವಾಂಗ್ ಈ ರೀತಿ ಮಾಡಿರುವುದು ಹಲವರ ಕಣ್ಣು ಕೆಂಪೇರಿಸಿದೆ. ಚೀನಾದ ಅತಿ ದೊಡ್ಡ ಶ್ರೀಮಂತನೆಂದು ಪರಿಗಣಿಸಲ್ಪಟ್ಟಿರುವ ವಾಂಗ್ ಜಿಂಗ್ಲಿಂಗ್ ಅವರ ಏಕ ಮಾತ್ರ ಪುತ್ರನಾಗಿರುವ ವಾಂಗ್ ಸಿಕಾಂಗ್ ಈ ಹಿಂದೆಯೂ ತನ್ನ ಐಷಾರಾಮಿ ಜೀವನ ಶೈಲಿಯ ಕಾರಣಕ್ಕಾಗಿ ಸುದ್ದಿಯಾಗಿದ್ದನೆಂದು ಹೇಳಲಾಗಿದೆ.

Write A Comment