ರಾಷ್ಟ್ರೀಯ

ಪೊಲೀಸನ ಮೊಬೈಲ್ ಕದ್ದು ಆತನ ಮೇಲೆಯೇ ಹಲ್ಲೆ ನಡೆಸಿದ ಖದೀಮರು

Pinterest LinkedIn Tumblr

8904antitheftನವದೆಹಲಿ: ಇತ್ತೀಚೆಗೆ ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಸುವವರ ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚುವ ದುಷ್ಕರ್ಮಿಗಳ ತಂಡ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ.

ದೆಹಲಿಯ ಪೊಲೀಸರೊಬ್ಬರು ತಮ್ಮ ಸ್ನೇಹಿತರೊಂದಿಗೆ ದೆಹಲಿ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಅವರ ಜೇಬಿನಿಂದ ಬೆಲೆ ಬಾಳುವ ಸ್ಯಾಮ್ಸಂಗ್ ಮೊಬೈಲ್ ಫೋನನ್ನು ಎಗರಿಸಿದ್ದಾನೆ. ಆತ ಸ್ವಿಚ್ ಆಫ್ ಮಾಡುವ ಸಂದರ್ಭದಲ್ಲಿ ಪೊಲೀಸ್ ಪೇದೆ ಸಚಿನ್ ಅವರಿಗೆ ಅದು ತಮ್ಮ ಮೊಬೈಲ್ ಎಂಬುದು ಗಮನಕ್ಕೆ ಬಂದಿದೆ.

ಆತನನ್ನು ಹಿಡಿಯಲು ಯತ್ನಿಸುವಷ್ಟರಲ್ಲೇ ಪ್ರಯಾಣಿಕರ ಸಮ್ಮುಖದಲ್ಲೇ ಚಾಕು ತೆಗೆದ ಆತ, ಸಚಿನ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಸಚಿನ್ ಅವರೊಂದಿಗಿದ್ದ ಅವರ ಸ್ನೇಹಿತ ನೆರವಿಗೆ ಧಾವಿಸಿದ್ದು, ಮೊಬೈಲ್ ಕಳ್ಳನ ಜೊತೆ ಪ್ರಯಾಣಿಸುತ್ತಿದ್ದ ಆತನ ಮೂವರು ಸಹಚರರು ಇಬ್ಬರ ಮೇಲೂ ಮುಗಿ ಬಿದ್ದಿದ್ದಾರೆ. ಈ ವೇಳೆ ಬಸ್ ಚಾಲಕ ಬಸ್ಸನ್ನು ನಿಲ್ಲಿಸಿದ್ದು, ಸಚಿನ್ ಹಾಗೂ ದೀಪಕ್ ಕಳ್ಳರನ್ನು ಹಿಡಯಲು ಬೆನ್ನಟ್ಟಿದರೂ ಅವರ ಮೇಲೆ ಕಲ್ಲು ತೂರಿ ಪರಾರಿಯಾಗುವಲ್ಲಿ ದುಷ್ಕರ್ಮಿಗಳು ಯಶಸ್ವಿಯಾಗಿದ್ದಾರೆ.

Write A Comment