ರಾಷ್ಟ್ರೀಯ

ತನ್ನಿಚ್ಚೆಯಂತೆ ವಿವಾಹವಾದ ಯುವತಿಯನ್ನು ನಾರಿ ನಿಕೇತನಕ್ಕೆ ಕಳುಹಿಸಿದ ಪೊಲೀಸರು

Pinterest LinkedIn Tumblr

8903courtmarriage

ಅಲಹಾಬಾದ್: ಮುಸ್ಲಿಂ ಯುವಕನನ್ನು ಪ್ರೀತಿಸಿ ಆತನನ್ನು ವಿವಾಹವಾದ ಶಾಲಾ ಶಿಕ್ಷಕಿಯೊಬ್ಬಳನ್ನು ನಾರಿ ನಿಕೇತನಕ್ಕೆ ಕಳುಹಿಸಿದ್ದಲ್ಲದೇ ಯುವಕನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿರುವ ಘಟನೆ ಉತ್ತರ ಪ್ರದೇಶದ ಅಮ್ರಾ ಜಿಲ್ಲೆಯಲ್ಲಿ ನಡೆದಿದೆ.

ಶಾಲಾ ಶಿಕ್ಷಕಿಯಾಗಿದ್ದ ಕಾಂಚನಾ ವರ್ಮಾ ಎಂಬವರು ಮುಸ್ಲಿಂ ಯುವಕ ನಾಸೀರ್ ಆಲಿಯನ್ನು ಪ್ರೀತಿಸಿದ್ದು, ಇಬ್ಬರೂ ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರು. ಆದರೆ ಯುವತಿಯ ಪೋಷಕರು ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಇವರುಗಳನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಶಿಕ್ಷಕಿ ಕಾಂಚನಾ ವರ್ಮಾಳನ್ನು ನಾರಿ ನಿಕೇತನಕ್ಕೆ ಹಾಗೂ ನಾಸೀರ್ ಆಲಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು.

ಈ ಕುರಿತು ಕಾಂಚನಾ ವರ್ಮಾ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ಸಂಪ್ರದಾಯಬದ್ದವಾಗಿ ವಿವಾಹವಾಗಿದ್ದರೂ ನ್ಯಾಯಾಂಗ ವಶಕ್ಕೊಪ್ಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಚನಾ ವರ್ಮಾ ತಾನು ಪ್ರಾಪ್ತ ವಯಸ್ಕಳಾಗಿದ್ದು, ತನ್ನಿಚ್ಚೆಯಂತೆ ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದರೂ ಅದನ್ನು ಪರಿಗಣಿಸದಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

Write A Comment