ಮನೋರಂಜನೆ

ಮೀಸೆ ಬಿಡಿಸಿದ್ದಕ್ಕೆ ಜೈಲು ಸೇರಿದ ಕಲಾವಿದ !!

Pinterest LinkedIn Tumblr

544IMG_1756

ಕೊಲೆ ಮಾಡಿ ಜೈಲು ಸೇರಿದ ಬಗೆಗೆ ಕೇಳಿದ್ದೀರಿ,. ಇನ್ನು ಕಳ್ಳತನ, ಸುಲಿಗೆ , ದರೋಡೆ, ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿದವರೂ ಜೈಲು ಕಂಬಿ ಎಣಿಸುವುದು ಸಾಮಾನ್ಯ.  ಆದರೆ ಚೈನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಮೀಸೆ ಬರೆದ ಕಲಾವಿದನೊಬ್ಬ ಜೈಲು ಸೇರಿದ್ದು  ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಪ್ರಖ್ಯಾತ ಛಾಯಾಚಿತ್ರಕಾರ ಡೈ ಜೈನ್ಯಾಂಗ್ ಅವರು ‘ಕೈಸಾಂಥೇನಿಯಮ್ ಮುಖ’ಗಳನ್ನು ಸೃಷ್ಟಿಸುವಲ್ಲಿ ಪ್ರವೀಣರು. ಈ ಹೂವು ಚೈನಾದ ಆಡು ಭಾಷೆಯಲ್ಲಿ ಗುದವನ್ನು ಪ್ರತಿನಿಧಿಸುತ್ತದೆ.

ಕ್ಸಿ ಅವರ ಚಿತ್ರ ಬಳಸಿ ಅಂತರ್ಜಾಲದಲ್ಲಿ ಸೂಟ್ ಕೇಸ್, ಟಿ ಶರ್ಟ್ ಮತ್ತು ಕೋಕ್ ಡಬ್ಬಗಳ ಮೇಲೆ ‘ಕೈಸಾಂಥೇನಿಯಮ್ ಮುಖ’ ಮೂಡಿಸಿ ಹಾಗು ವಿಚಿತ್ರ ಮೀಸೆ ಬರೆದು ಪ್ರಕಟಿಸಿದ್ದು ಕ್ಸಿ ಫೋಟೋದ ಮೇಲೆ ಮೂಡಿಸಿದ ಮೀಸೆ ಹಿಟ್ಲರ್ ಮೀಸೆಗೆ ಹೋಲಿಕೆಯಾಗದಿದ್ದರೂ ಹಲವು ಅಂತರ್ಜಾಲ ಬಳಕೆದಾರರು ಅದು ಹಿಟ್ಲರ್ ನನ್ನು ನೆನಪಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

ಈ ಹಿನ್ನೆಲೆಯಲ್ಲಿ  ಡೈ ಅವರನ್ನು ಬಂಧಿಸಿದ್ದು ಆರೋಪ ಸಾಬೀತಾದರೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆಯಂತೆ.

Write A Comment