ಅಂತರಾಷ್ಟ್ರೀಯ

ಟೆಕ್ಸಾಸ್:ಆಗಂತುಕರ ಗುಂಡಿಗೆ 9 ಮಂದಿ ಅಮಾಯಕರು ಬಲಿ

Pinterest LinkedIn Tumblr

Biker-Attack

ಟೆಕ್ಸಾಸ್, ಮೇ 18: ಇಲ್ಲಿನ ವಾಕೊ ಪ್ರದೇಶದಲ್ಲಿರುವ ಪ್ರತಿಷ್ಠಿತ ರೆಸ್ಟೋರೆಂಟ್‌ವೊಂದರ ಬಳಿ ಪಾರ್ಕಿಂಗ್ ಸ್ಥಳಕ್ಕೆ ಸಂಬಂಧಿಸಿದಂತೆ ನಡೆದ ಗುಂಪು ಘರ್ಷಣೆಯಲ್ಲಿ, ಬೈಕ್‌ಗಳ ಮೇಲೆ ಬಂದ ಆಗಂತುಕರು ಗುಂಡು ಹಾರಿಸಿ 9 ಜನರನ್ನು ಸ್ಥಳದಲ್ಲೇ ಹತ್ಯೆ ಮಾಡಿ ಸುಮಾರು 10ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಘಟನೆ ನಡೆದಿದೆ.

ಅನೇಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಾಕೊ ಸಾರ್ಜೆಂಟ್ ಪ್ಯಾಟ್ರಿಕ್ ಸ್ಯಾಂಟೋನ್ ಹೇಳಿದ್ದಾರೆ. ಟ್ವಿನ್ ಪೀಕ್ಸ್ ಸ್ಪೋರ್ಟ್ಸ್ ಬಾರ್ ರೆಸ್ಟೋರೆಂಟ್ ಹಾಗೂ ಶಾಪಿಂಗ್ ಮಾಲ್ ನಡುವಿನ ಪಾರ್ಕಿಂಗ್ ಸ್ಥಳದ ವಿಷಯದಲ್ಲಿ ಮೂರು ಗ್ಯಾಂಗ್‌ಗಳ ನಡುವೆ ಈ ಘರ್ಷಣೆ ಆರಂಭವಾಯಿತು. ಅದರಲ್ಲಿ ಬೈಕ್‌ಗಳ ಮೇಲೆ ಬಂದಿದ್ದ ಐವರ ತಂಡ ಯದ್ವಾತದ್ವಾ ಗುಂಡು ಹಾರಿಸಿತು. ಈ ದಾಳಿಗೆ 9 ಜನ ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿ, ಹಲವರು ಗಾಯಗೊಂಡರು. ಇಂಥ ಭೀಕರ ಕಾದಾಟವನ್ನು ನಾನು ನೋಡಿಯೇ ಇರಲಿಲ್ಲ ಎಂದಿರುವ ಸಾರ್ಜಂಟ್ ಪ್ಯಾಟ್ರಿಕ್ ಇಡೀ ಮೈದಾನ ರಕ್ತದ ಮಡುವಾಗಿತ್ತು ಎಂದಿದ್ದಾರೆ.

Write A Comment