ಕರ್ನಾಟಕ

ಸನ್ನಿ ಲಿಯೋನ್‌ಳನ್ನು ದೇಶದಿಂದ ಹೊರ ಹಾಕಿ: ಪ್ರಮೋದ್ ಮುತಾಲಿಕ್

Pinterest LinkedIn Tumblr

pramodmuthalik11

ಹುಬ್ಬಳ್ಳಿ,ಮೇ 18: ಅಶ್ಲೀಲ ಚಿತ್ರಗಳ ನಟಿ ಸನ್ನಿ ಲಿಯೋನ್‌ಳನ್ನು ದೇಶದಿಂದ ಹೊರಹಾಕಬೇಕೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಟಿ ಇತ್ತೀಚಿನ ಚಿತ್ರಗಳಲ್ಲಿ ನಟಿಸಿದ್ದು, ಭಾರತದಿಂದ ಈಕೆಯನ್ನು ಹೊರ ಹಾಕಬೇಕು. ಇಲ್ಲವಾದರೆ ಸಮಾಜದ ಮೇಲೆ ಅದರಲ್ಲೂ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು.

ಸನ್ನಿ ಲಿಯೋನ್‌ಳ ಅಸಹ್ಯ ಅಶ್ಲೀಲ ಅಸಭ್ಯ ಚಿತ್ರಗಳು ಹಾಗೂ ವಿಡಿಯೋಗಳು ಅವಳ ವೆಬ್‌ಸೈಟ್‌ನಲ್ಲಿದ್ದು , ಕೂಡಲೇ ಅದನ್ನು ದೇಶದಲ್ಲಿ ನಿಷೇಧಿಸಬೇಕೆಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು. ಇವಳು ನಟಿಸಿದ ಚಿತ್ರಗಳನ್ನು ರದ್ದು ಮಾಡಿ ಅಶ್ಲೀಲ ಚಿತ್ರಕ್ಕೆ ಕತ್ತರಿ ಹಾಕಬೇಕು. ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹಿಂದೂ ಜನಜಾಗೃತಿ ಸಮಿತಿಯ ಕುಮಾರಿ ಸ್ಪೂರ್ತಿ ಬೆನಕವಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment