ಅಂತರಾಷ್ಟ್ರೀಯ

2013ರ ಬೋಸ್ಟನ್ ಬ್ಲಾಸ್ಟ್ ಪ್ರಕರಣ : 19 ವರ್ಷದ ಝೇಕಾರ್ ಗೆ ಗಲ್ಲು

Pinterest LinkedIn Tumblr

marathon-blast

ವಾಷಿಂಗ್ಟನ್, ಮೇ 16: ಬೋಸ್ಟನ್‌ನಲ್ಲಿ ಮ್ಯಾರಾಥಾನ್ ವೀಕ್ಷಿಸುತ್ತಿದ್ದವರ ಮೇಲೆ ಬಾಂಬ್ ದಾಳಿ ನಡೆಸಿ ಮೂವರನ್ನು ಬಲಿ ತೆಗೆದುಕೊಂಡು 260 ಜನರನ್ನು ಗಾಯಗೊಳಿಸಿದ್ದ ಮೆಸಾಚುಸೆಟ್ಸ್ ಯೂನಿವರ್ಸಿಟಿ ವಿದ್ಯಾರ್ಥಿ 19 ವರ್ಷದ ಝೇಕಾರ್ ತ್ಯಾಗ್ನೇವ್‌ಗೆ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ತನ್ನನ್ನು ತಾ ಜಹಾರ್ ಎಂದು ಕರೆದುಕೊಂಡಿದ್ದ ತ್ಸಾರ್ನೇ ವ್ ಅಶಿಸ್ತಿನ ವಿದ್ಯಾರ್ಥಿಯಾಗಿದ್ದರೂ ಉತ್ತಮನಾಗಿದ್ದ. ಪಾರ್ಟಿಗಳೆಂದರೆ ಇಷ್ಟ ಪಡುತ್ತಿದ್ದ. ತಾನು ಕಂಡುಹಿಡಿದ ವಿಚಾರಗಳನ್ನು ಟ್ವಿಟರ್ ಮೂಲಕ ಇತರರೊಂದಿಗೆ ಹಂಚಿಕೊಳ್ಳುತ್ತಿದ್ದ. ಆಗೊಮ್ಮೆ ಈಗೊಮ್ಮೆ ಸ್ಮೋಕ್ ಮಾಡುತ್ತಿದ್ದ. ಎಲ್ಲ ವಿಷಯದಲ್ಲೂ ಮಾಮೂಲಾಗಿಯೇ ಇದ್ದ ಈ ವಿದ್ಯಾರ್ಥಿ 2013ರ ಏ.15ರದು ಸ್ಫೋಟ ನಡೆಸುವ ಮುನ್ನ ಅಮೆರಿಕದ ಪೌರತ್ವವನ್ನೂ ಪಡೆದಿದ್ದ. ಏಕೆಂದರೆ, ಇವನ ಕುಟುಂಬ 2002ರಲ್ಲಿ ಕಿರ್ಜಿಸ್ಥಾನ್‌ನಿಂದ ಅಮೆರಿಕಕ್ಕೆ ಬಂದು ನೆಲೆಸಿತ್ತು.

ಬೋಸ್ಟನ್ ಬಾಂಬ್ ತ್ಸಾರ್ನೇ ವ್ ಮ್ಯಾರಾಥಾನ್ ವೀಕ್ಷಣೆ ವೇಳೆ ಎರಡು ಕಡೆ ಬಾಂಬ್ ಸ್ಫೋಟಿಸಿದ್ದ. ಅದರಲ್ಲಿ ಮೂವರು ಮೃತಪಟ್ಟು 260 ಜನ ಗಾಯಗೊಂಡಿದ್ದರು. ಆನ್‌ಲೈನ್‌ನಲ್ಲಿ ಅಲ್‌ಖೈದಾ ಮ್ಯಾಗಜಿನ್ ನೋಡಿ ಬಾಂಬ್ ತಯಾರಿಕೆ ಕಲಿತಿದ್ದು, ತಾನೇ ಬಾಂಬ್ ಸಿದ್ಧಪಡಿಸುತ್ತಿದ್ದ. ಇಂದು ಶಿಕ್ಷೆ ಪ್ರಕಟವಾದ ಬಳಿಕ ಅವನ ಮುಖದ ಮೇಲೆ ಯಾವುದೇ ಬದಲಾವಣೆಯಾಗಲಿ, ಕುತೂಹಲ, ಭಯಗಳಾಗಲಿ ಕಣಲಿಲ್ಲ. ನಿರ್ವಿಕಾರವಾಗಿದ್ದ. ತನ್ನ ಐವರು ವಕೀಲರೊಂದಿಗೆ ಆಗೊಂದು, ಈಗೊಂದು ಮಾತು ಬಿಟ್ಟರೆ ಉಳಿದಂತೆ ಮೌನವಾಗಿದ್ದ. ನ್ಯಾಯಾಧೀಶರು ತೀರ್ಪನ್ನು ಓದಿ, ಶಿಕ್ಷೆ ಪ್ರಕಟಿಸಿದಾಗಲೂ ತ್ಸಾರ್ನೇ ವ್ ಸುಮ್ಮನೆ ಮೌನವಾಗಿಯೇ ಇದ್ದ ಎಂದು ಪೊಲೀಸರು ಹೇಳಿದ್ದಾರೆ.

Write A Comment