ರಾಷ್ಟ್ರೀಯ

ಕಪ್ಪುಹಣ ವಾಪಸ್ : ಮೋದಿ ಸರ್ಕಾರಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಸ್ವಿಸ್ ಘೋಷಣೆ

Pinterest LinkedIn Tumblr

Swiss-black-m-oney

ನವದೆಹಲಿ, ಮೇ 16: ಪ್ರಧಾನಿ ನರೇಂದ್ರಮೋದಿ ಸರ್ಕಾರ ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿರುವ ಸ್ವಿಟ್ಜರ್ಲೆಂಡ್, ಈ ಕುರಿತಂತೆ ಹಳೆ ಕಾಯ್ದೆಗೆ ಸಂಸತ್ತಿನಲ್ಲಿ ತಿದ್ದುಪಡಿ ತಂದು ಕಾಳಧನಿಕರ ವಿರುದ್ಧದ ಸಮರಕ್ಕೆ ಹಾದಿ ಸುಗಮ ಮಾಡಿಕೊಡುವುದಾಗಿ ಹೇಳಿದೆ.

ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿರುವ ಸ್ವಿಟ್ಜರ್ಲೆಂಡ್ ಹಣಕಾಸು ಸಚಿವೆ ಜೊಹಾನ್ ಶ್ನೀಡರ್ ಅಮ್ಮಾನ್ ಅವರು, ಇಂದಿಲ್ಲಿ ಈ ಕುರಿತಂತೆ ಪ್ರಸ್ತಾಪಿಸಿದ್ದು ಈ ವರ್ಷದ ಅಂತ್ಯಭಾಗದಲ್ಲಿ ಕಪ್ಪು ಹಣಮಸೂದೆಗೆ ಸಂಸತ್ತಿನಲ್ಲಿ ತಿದ್ದುಪಡಿ ತರಲು ಸ್ವಿಸ್ ಸರ್ಕಾರ ತಯಾರಿ ನಡೆಸಿದೆ ಎಂದು ಹೇಳಿದ್ದಾರೆ. ಕಪ್ಪು ಹಣ ವಿರುದ್ಧದ ಭಾರತದ ಹೋರಾಟದಲ್ಲಿ ಎಲ್ಲ ಸಹಕಾರ ನೀಡಲು ಸ್ವಿಸ್ ಸರ್ಕಾರ ಪೂರ್ಣ ಬದ್ಧವಾಗಿದೆ. ಭಾರತ ಮತ್ತು ಇತರ ದೇಶಗಳವರು ನಮ್ಮ ದೇಶದ ಬ್ಯಾಂಕ್‌ಗಳಲ್ಲಿ ಶೇಖರಿಸಿರುವ ಭಾರೀ ಪ್ರಮಾಣದ ಹಣವನ್ನು ಆಯಾ ದೇಶಗಳು ಮರಳಿ ವಾಪಸ್ ಪಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೂ ಅನುಕೂಲವಾಗುವಂತೆ ಹೊಸ ಕಾನನು ತಿದ್ದುಪಡಿ ತರಲು ಸ್ವಿಸ್ ಸಂಸತ್ತು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕಪ್ಪು ಹಣ ವಾಪಸಾತಿ ವಿಷಯದಲ್ಲಿ ಎದುರಾಗಿರುವ ಕಾನೂನು ತೊಡಕುಗಳ ಬಗ್ಗೆ ಭಾರತ ಸರ್ಕಾರ ಸ್ವಿಸ್ ಸರ್ಕಾರಕ್ಕೆ ಒತ್ತಡ ಹೇರಿದ್ದ ಹಿನ್ನೆಲೆಯಲ್ಲಿ ಸಚಿವ ಶ್ನೀಡರ್ ಇಂದು ಈ ಹೇಳಿಕೆ ನೀಡಿದ್ದಾರೆ.

ಸ್ವಿಸ್ ಹಣಕಾಸು ಸಚಿವ ಶ್ನೀಡರ್ ಜತೆ ಹಲವು ದ್ವಿಪಕ್ಷೀಯ ವಿಷಯಗಳ ಕುರಿತಂತೆ ಚರ್ಚಿಸಿದ ವಿತ್ತಮಂತ್ರಿ ಅರುಣ್ ಜೈಟ್ಲಿ, ಸ್ವಿಸ್ ಸರ್ಕಾರಕ್ಕೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದೇವೆ ಮತ್ತು ಕಪ್ಪು ಹಣ ವಿರುದ್ಧದ ಹೋರಾಟದಲ್ಲಿ ನಾವು ಸ್ವಿಟ್ಜರ್ಲೆಂಡ್ ಸರ್ಕಾರದ ಜತೆ ಪೂರ್ಣ ಸಹಕಾರದೊಂದಿಗೆ ಕೈ ಜೋಡಿಸಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

Write A Comment