127 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಕಾಂಗೋದ ದಕ್ಷಿಣ ಕಿವು ಪ್ರಾಂತ್ಯದ ಪೂರ್ವ ಪ್ರಜಾಸತ್ತಾತ್ಮಕ ಗಣರಾಜ್ಯದ ಪಟ್ಟಣವೊಂದರಲ್ಲಿ ನಡೆದಿದೆ.
ಮೇ ಒಂದರಂದು ದಕ್ಷಿಣ ಕಿವುನ ಶಾಬುಂದಾ ಪ್ರಾಂತ್ಯದ ಕಿಕಾಂಬಾ ನಗರದಲ್ಲಿ ಸುಮಾರು 60 ಕ್ಕೂ ಹೆಚ್ಚು ಉಗ್ರರು ದಾಳಿ ನಡೆಸಿದ್ದರು. ಈ ಸಮಯದಲ್ಲಿ ಅಲ್ಲಿದ್ದ ಸುಮಾರು 127 ಮಂದಿ ಮಹಿಳೆಯರನ್ನು ತಮ್ಮ ಕಾಮ ತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾರೆ ಎಂದು ವೈದ್ಯಕೀಯ ಚಿಕಿತ್ಸಾ ಚ್ಯಾರಿಟಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಸ್ಥೆಯೊಂದು ಹೇಳಿಕೆ ನೀಡಿದೆ.
ಏಕಾಏಕಿ ದಾಳಿ ನಡೆಸಿದ ಈ ಉಗ್ರರು ಅಲ್ಲಿದ್ದ ಹೆಂಗಳೆಯರನ್ನು ಕಂಡು ಮರುಳಾಗಿದ್ದು ಅವರನ್ನು ಬೆದರಿಸಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದ್ದು ಉಗ್ರರು ಅಲ್ಲಿಂದ ತೆರಳಿದ ಮೇಲೆ ಅಲ್ಲಿಗೆ ಆಗಮಿಸಿದ ಎಮ್ಎಸ್ಎಫ್ ವೈದ್ಯಕೀಯ ಸಿಬ್ಬಂದಿ 127 ಪೀಡಿತರಿಗೆ ಚಿಕಿತ್ಸೆ ನೀಡಿದರು.
ಅತ್ಯಾಚಾರಕ್ಕೊಳಗಾದವರಲ್ಲಿ 14 ವರ್ಷದ ಬಾಲಕಿಯರಿಂದ ಹಿಡಿದು 70 ವರ್ಷದ ವಯೋವೃದ್ದರೂ ಇದ್ದರು ಎನ್ನಲಾಗಿದ್ದು, ಇತ್ತೀಚೆಗೆ ಕಾಂಗೊದಲ್ಲಿ ನಡೆಯುತ್ತಿರುವ ಉಗ್ರರ ಇಂತಹ ಕಾಮುಕ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ.
