ರಾಷ್ಟ್ರೀಯ

ಇಂಧನ ದರ ಏರಿಕೆ : ಮೋದಿ ಸರ್ಕಾರದ ವಾರ್ಷಿಕೋತ್ಸವದ ಕೊಡುಗೆ ಎಂದ ಕಾಂಗ್ರೆಸ್

Pinterest LinkedIn Tumblr

2193modi

ಶುಕ್ರವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು  ಡೀಸೆಲ್ ಬೆಲೆ ಏರಿಕೆ ಕಾಣುತ್ತಿದ್ದಂತೆ ಇದು ನರೇಂದ್ರ ಮೋದಿ ಸರ್ಕಾರದ ವಾರ್ಷಿಕೋತ್ಸವದ ಕೊಡುಗೆ ಎಂದು ಕಾಂಗ್ರೆಸ್ ಕುಟುಕಿದೆ.

ಇಂಧನ ದರ ಏರಿಕೆ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ವಾರ್ಷಿಕೋತ್ಸವದ ಉಡುಗೊರೆಗಿದ್ದು ಇನ್ನೂ ಹೆಚ್ಚಿನ ಉಡುಗೊರೆಗಳು ಜನತೆಗೆ  ಮುಂದಿನ ದಿನಗಳಲ್ಲಿ ಸಿಗಲಿವೆ ಎಂದು ಕಾಂಗ್ರೆಸ್ ವಕ್ತಾರ ಆರ್.ಪಿ.ಎನ್.ಸಿಂಗ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ 30 ವರ್ಷಗಳ ಬಳಿಕ ಭಾರಿ ಬಹುಮತದ ಮೇಲೆ ಅಸ್ತಿತ್ವಕ್ಕೆ  ಬಂದಿದ್ದು ಅದರ ಮೊದಲ ವಾರ್ಷಿಕೋತ್ಸವದ ಉಡುಗೊರೆಯಾಗಿ ಇಂಧನ ದರವನ್ನು ಏರಿಕೆ ಮಾಡಿದ್ದು  ಜನರಿಗೆ ಇನ್ನೂ ಹೆಚ್ಚಿನ ಉಡುಗೊರೆಗಳನ್ನು ನೀಡಲು ಸರ್ಕಾರ ಉತ್ಸುಕವಾಗಿದೆ ಎಂದು ಟಾಂಗ್ ನೀಡಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ದರ ಪ್ರತಿ ಲೀ.ಗೆ 3.31 ಹಾಗೂ ಡೀಸೆಲ್ ದರ ಪ್ರತಿ ಲೀ.ಗೆ 2.71 ರೂಪಾಯಿ ಏರಿಕೆಯಾಗಿತ್ತು. ಈ ಏರಿಕೆ ಸಾರ್ವಜನಿಕರ ಹಾಗೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

Write A Comment