ಮುಂಬೈ

ರೇವ್ ಪಾರ್ಟಿ ಆಯೋಜಕನ ಮನವಿ ತಳ್ಳಿ ಹಾಕಿದ ನ್ಯಾಯಾಲಯ

Pinterest LinkedIn Tumblr

7426rave-party-2

ಮುಂಬೈ: 2012 ರ ಮೇ ತಿಂಗಳಿನಲ್ಲಿ ಮುಂಬೈ ಹೋಟೆಲ್ ಮಾಲೀಕನೊಬ್ಬ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಐಪಿಎಲ್ ಆಟಗಾರರಾದ ರಾಹುಲ್ ಶರ್ಮಾ ಹಾಗೂ ವೇಯ್ನ್ ಪರ್ನೆಲ್ ಪಾಲ್ಗೊಂಡಿದ್ದ ಪ್ರಕರಣವನ್ನು ಕೈ ಬಿಡಲು ಕೋರಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ವಿಷಯ್ ಹಂಡಾ ಎಂಬ ಹೋಟೆಲ್ ಮಾಲೀಕ ಏರ್ಪಡಿಸಿದ್ದ ಈ ರೇವ್ ಪಾರ್ಟಿಯಲ್ಲಿ ಕ್ರಿಕೆಟ್ ಆಟಗಾರರು, ಬಾಲಿವುಡ್ ಸೆಲೆಬ್ರಿಟಿಗಳೂ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ವೇಳೆ ದಾಳಿ ನಡೆಸಿದ್ದ ಪೊಲೀಸರಿಗೆ ಡ್ರಗ್ಸ್ ಸಹ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ವಿಷಯ್ ಹಂಡಾ ಸೇರಿದಂತೆ 86 ಮಂದಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣವನ್ನು ಕೈ ಬಿಡುವಂತೆ ವಿಷಯ್ ಹಂಡಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ನ್ಯಾಯಾಲಯ ಇದನ್ನು ತಳ್ಳಿ ಹಾಕಿದೆ. 2012 ರಲ್ಲಿ ನಡೆದಿದ್ದ ಈ ರೇವ್ ಪಾರ್ಟಿಯಲ್ಲಿ ಇಬ್ಬರು ಐಪಿಎಲ್ ಆಟಗಾರರು ಹಾಗೂ ಬಾಲಿವುಡ್ಡಿನ ಕೆಲ ಪ್ರತಿಷ್ಟಿತರೂ ಸಹ ಪಾಲ್ಗೊಂಡಿದ್ದು, ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

Write A Comment