ಅಂತರಾಷ್ಟ್ರೀಯ

ಕುಟುಂಬವನ್ನು ಕೊಲೆ ಮಾಡಿ ಫೇಸ್ ಬುಕ್ ನಲ್ಲಿ ಒಪ್ಪಿಕೊಂಡ ಭೂಪ..!

Pinterest LinkedIn Tumblr

face

ಕೆನಡಾ: ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹತ್ಯೆ ಮಾಡಿರುವುದನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನ ತನ್ನ ಅಕೌಂಟಿನಲ್ಲಿ ಬರೆದುಕೊಂಡಿರುವ ಘಟನೆ ನಡೆದಿದೆ.

ಕೆನಡಾದ ರ್ಯಾಂಡಿ ಜಾನಝೇನ್ ಎಂಬಾತ ಮೊದಲು ತನ್ನ 19 ವರ್ಷದ ಪುತ್ರಿಯನ್ನು ಕೊಲೆ ಮಾಡಿದ್ದಾನೆ. ಮಗಳ ಸಾವಿನಿಂದ ತಾಯಿ ನೊಂದುಕೊಳ್ಳುತ್ತಾಳೆಂದು ಪತ್ನಿಯನ್ನೂ ಸಾಯಿಸಿದ್ದಾನೆ. ಬಳಿಕ ತಾನು ಮಾಡಿರುವ ಕೊಲೆ ಕುರಿತು ಸಹೋದರಿಗೆ ತಿಳಿದರೆ ನೊಂದುಕೊಳ್ಳುತ್ತಾಳೆಂದು ಆಕೆಯನ್ನೂ ಮುಗಿಸಿದ್ದಾನೆ.

ಪತ್ನಿ, ಪುತ್ರಿ ಹಾಗೂ ಸಹೋದರಿಯನ್ನು ಕೊಂದ ಬಳಿಕ ಈತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಇದಕ್ಕೂ ಮುನ್ನ ತನ್ನ ಫೇಸ್ ಬುಕ್ ಖಾತೆಯಲ್ಲಿ ತಾನು ಮಾಡಿರುವ ಕೊಲೆ ಕುರಿತು ತಪ್ಪೊಪ್ಪಿಗೆ ಬರೆದುಕೊಂಡಿದ್ದಾನೆ. ತನ್ನ 19 ವರ್ಷದ ಪುತ್ರಿ ಕಾಯಿಲೆಯಿಂದ ಅನುಭವಿಸುತ್ತಿದ್ದ ತೊಂದರೆಯನ್ನು ನೋಡಲಾರದೆ ತಾನು ಈ ಕೃತ್ಯವೆಸಗಿರುವುದಾಗಿ ಆತ ಹೇಳಿಕೊಂಡಿದ್ದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

Write A Comment