ರಾಷ್ಟ್ರೀಯ

ದೇಶದ ಜನತೆಗೆ ‘ಮೂರು ಮುತ್ತು’ ಕೊಟ್ಟ ಮೋದಿ ಸರ್ಕಾರ

Pinterest LinkedIn Tumblr

4483Modi-new-

ಜನ್- ಧನ್ ಯೋಜನೆಯಿಂದ ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಇಂದು ಮೂರು ಬೃಹತ್ ಯೋಜನೆಗಳನ್ನು ಆರಂಭಿಸಿದ್ದು ಮತ್ತೊಮ್ಮೆ ತಮ್ಮ ಅಚ್ಛೇದಿನ್​ ಕಲ್ಪನೆಯನ್ನು ಸಾಕಾರ ಗಳಿಸಲು ಮುಂದಾಗಿದೆ.

ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಇದು ಮೋದಿ ಅವರ ದೂರ ದೃಷ್ಟಿಯ ಫಲವಾಗಿದ್ದು  ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವವರು ಆ ಬ್ಯಾಂಕಿಗೆ ತೆರಳಿ ವಾರ್ಷಿಕ 12 ರೂ. ಪಾವತಿಸಿದರೆ ಒಂದೊಮ್ಮೆ ಆ ವ್ಯಕ್ತಿ ಅಪಘಾತದಿಂದ ಮರಣ ಹೊಂದಿದರೆ 2 ಲಕ್ಷ, ಭಾಗಶಃ, ಶಾಶ್ವತ ಅಂಗವೈಕಲ್ಯ ಉಂಟಾದವರಿಗೆ 1 ಲಕ್ಷ ರೂ. ಅಪಘಾತ ವಿಮೆಯನ್ನು ಸಂಬಂಧಿಸಿದ ನಾಮನಿರ್ದೇಶಿತರಿಗೆ ನೀಡಲಾಗುವುದು. 18 ರಿಂದ 70 ವರ್ಷ ವಯೋಮಾನದವರು ಈ ವಿಮೆ ಹೊಂದಬಹುದಾಗಿದ್ದು ಇದರಿಂದ ಬಡವರ್ಗದ ಜನರಿಗೆ ಅತ್ಯಂತ ಅನುಕೂಲವಾಗಲಿದೆ.

ಪ್ರಧಾನಮಂತ್ರಿ ಜೀವನ್​ ಜ್ಯೋತಿ ಭೀಮಾ ಯೋಜನೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಈ ಯೋಜನೆಯಡಿಯಲ್ಲಿ 18 – 50 ವರ್ಷದೊಳಗಿನವರು ಈ ವಿಮೆ ಹೊಂದಲು ಅರ್ಹರಾಗಿರುತ್ತಾರೆ. ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಇದನ್ನು ಜಾರಿಗೊಳಿಸಲಿದ್ದು  ವಾರ್ಷಿಕ 330 ರೂಪಾಯಿ ಪಾವತಿಸಿದ ವಿಮಾದಾರರು ಯಾವುದೇ ರೀತಿಯಲ್ಲಿ ಮೃತಪಟ್ಟರೂ 2 ಲಕ್ಷ ರೂಪಾಯಿ ವಿಮಾ ಹಣ ದೊರೆಯುತ್ತದೆ. ಇದರಿಂದ ಅವರ ಕುತುಮ್ಬಕ್ಕೊಂದು ಭದ್ರತೆ ಕಲ್ಪಿಸಿದಂತಾಗುತ್ತದೆ.

ಅಟಲ್​ ಪೆನ್ಶನ್​ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಪೆನ್ಶನ್​ ಕಲ್ಪಿಸಲು  ಮುಂದಾಗಿರುವ ಕೇಂದ್ರ ಸರ್ಕಾರ ಈ ವರ್ಗದ ಜನ ತಮ್ಮ ವೃದ್ದಾಪ್ಯದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದಾಗಿದೆ. ಈ ಯೋಜನೆಯ ಪ್ರಕಾರ  60 ವರ್ಷದ ನಂತರ 1 ಸಾವಿರದಿಂದ 5 ಸಾವಿರದವರಗೆ ಪ್ರತೀ ತಿಂಗಳು ಪಿಂಚಣಿ ಬರುವಂತೆ ವ್ಯವಸ್ಥೆ ಮಾಡಿದ್ದು, ಆ ವ್ಯಕ್ತಿಯು ತುಂಬಿದ ಪ್ರಿಮಿಯಂನ್ನು ಆಧರಿಸಿ, ಪಿಂಚಣಿ ನಿಗದಿಯಾಗಲಿದೆ.

ಒಟ್ಟಾರೆ ಕೇವಲ ಪ್ರಚಾರಕ್ಕೋಸ್ಕರ ಯೋಜನೆಯನ್ನು ಘೋಷಿಸುವುದನ್ನು ಬಿಟ್ಟು ಭಾರತದ ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಸೌಲಭ್ಯವನ್ನು ಪಡೆಯುವಂತಾಗಬೇಕು ಎಂಬ ಆಶಯ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾಗಿಯೂ ‘ಅಚ್ಚೇ ದೀನ್’ ಕನಸನ್ನು ನನಸಾಗಿಸಲು ಈ ಯೋಜನೆಗಳು ಸಾಕಾರವಾಗಬಹುದು ಎಂಬ ಮಾತುಗಳುಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Write A Comment