ರಾಷ್ಟ್ರೀಯ

ಗುಜರಾತ್‌ನ ಕಛ್‌ನಲ್ಲಿ ಲಘು ಭೂಕಂಪ

Pinterest LinkedIn Tumblr

kach

ಕಛ್: ನೇಪಾಳ ಮತ್ತು ಉತ್ತರ ಭಾರತದ ಹಲವೆಡೆ ವಿನಾಶಕಾರಿ ಭೂಕಂಪವಾದ ಬೆನ್ನಲ್ಲೇ ಇಂದು ಮುಂಜಾನೆ ಗುಜರಾತ್‌ನ ಕಛ್‌ನಲ್ಲಿ 4.3 ತೀವೃತೆಯ ರಿಕ್ಟರ್ ಮಾಪಕದಲ್ಲಿ ಭೂಮಿ ಕಂಪಿಸಿದೆ. ಭೂಮಿ ಕಂಪಿಸಿದ್ದರಿಂದ ಆತಂಕಗೊಂಡ ಜನ ಮನೆ ಒಳಗಿನಿಂದ ಹೊರಗೆ ಓಡಿ ಬಂದಿದ್ದಾರೆ. ಸಾವು- ನೋವು, ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿಲ್ಲ.

ಇಂದು ಮುಂಜಾನೆ 6.30ರ ಸುಮಾರಿಗೆ ಸುಮಾರಿಗೆ ಭೂಮಿ ಅಲುಗಾಡಿದ ಅನುಭವವಾಗಿದ್ದರಿಂದ ಆಗ ತಾನೇ ನಿದ್ದೆ ಬಿಟ್ಟು ಎದ್ದಿದ್ದ ಮತ್ತು ನಿದ್ದೆಯ ಗುಂಗಲ್ಲೇ ಎದ್ದ ಜನರು ಗಾಬರಿಗೊಂಡು ಮನೆ ಹೊರಕ್ಕೆ ಓಡಿ ಬಂದಿದ್ದಾರೆ ಎಂದು ಕಛ್ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭೂಕಂಪದ ಕೇಂದ್ರಸ್ಥಾನ ಜಿಲ್ಲೆಯ ಭುಜ್ ಪಟ್ಟಣದಿಂದ 22 ಕಿ.ಮೀ. ವಾಯುವ್ಯದಲ್ಲಿತ್ತು ಎಂದು “ಭೂಕಂಪಶಾಸ್ತ್ರದ ಸಂಶೋಧನಾ ಸಂಸ್ಥೆಯ (ISR) ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ 7.47 ರ ಸುಮಾರಿಗೆ ಮತ್ತೆ ಭೂಪಿ ರಿಕ್ಟರ್ ಮಾಪಕ 2 ರ ಪ್ರಮಾಣದಲ್ಲಿ ಕಂಪಿಸಿರುವುದಾಗಿ ಅವರು ತಿಳಿಸಿದ್ದಾರೆ

2001 ಜನವರಿ 26 ರಂದು ಕಛ್‌ನಲ್ಲಿ ನಡೆದಿದ್ದ ಭೀಕರ ಭೂಕಂಪದಲ್ಲಿ 20000 ಜನ ಜೀವತೆತ್ತಿದ್ದರು. ಘಟನೆಯಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Write A Comment