ಮುಂಬೈ (ಪಿಟಿಐ): ಅಮೆರಿಕ ಅಧ್ಯಕ್ಷರ ಭಾರತ ಭೇಟಿಯ ಖರ್ಚು–ವೆಚ್ಚಗಳ ಮಾಹಿತಿ ನೀಡಲು ವಿದೇಶಾಂಗ ಇಲಾಖೆ ನಿರಾಕರಿಸಿದೆ.
ಆರ್‌ಟಿಐ ಅಡಿ ಈ ಮಾಹಿತಿ ಕೇಳ ಲಾಗಿತ್ತು. ಆದರೆ, ಇದು ಸೂಕ್ಷ್ಮ ಹಾಗೂ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿ ಣಾಮ ಬೀರಲಿದೆ ಎಂಬ ಕಾರಣ ನೀಡಿ ಇಲಾಖೆ ಮಾಹಿತಿ ನೀಡಿಲ್ಲ.
ಜನವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಈ ಭೇಟಿಗೆ ಎಷ್ಟು ಖರ್ಚು ತಗಲಿತ್ತು, ಅವರ ಸಿಬ್ಬಂದಿಗೆ ಯಾವ ವ್ಯವಸ್ಥೆ ಕೈಗೊಳ್ಳಲಾಗಿತ್ತು ಎಂಬ ಮಾಹಿತಿ ನೀಡಬೇಕು ಎಂದು ಮುಂಬೈ ಮೂಲದ ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರು ಅರ್ಜಿ ಸಲ್ಲಿಸಿ ದ್ದರು.
ಇಷ್ಟೇ ಅಲ್ಲದೇ, ಎರಡು ಕಡೆಗ ಳಿಂದ (ಭಾರತ–ಅಮೆರಿಕ) ಒಬಾಮ ಭದ್ರತೆಗೆ ಯಾವ ನಮೂನೆಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು, ಎಷ್ಟು ಪೊಲೀ ಸರನ್ನು ನಿಯೋಜನೆ ಮಾಡಲಾಗಿತ್ತು ಎಂಬ ಮಾಹಿತಿಯನ್ನೂ ಕೇಳಿದ್ದರು. ಪ್ರತಿ ವರ್ಷವೂ ವಿವಿಧ ದೇಶಗಳ ಗಣ್ಯರು ಮತ್ತು ನಿಯೋಗಗಳು ದೇಶಕ್ಕೆ ಭೇಟಿ ನೀಡುತ್ತವೆ.
ಪ್ರತಿಯೊಂದು ನಿಯೋಗದ ಭೇಟಿಯೂ ಭಿನ್ನ ಉದ್ದೇಶಗಳನ್ನು ಹೊಂದಿರುತ್ತದೆ. ಅವರು ಭೇಟಿ ನೀಡುವ ನಗರಗಳು ಕೂಡ ಬೇರೆ ಬೇರೆಯಾಗಿರುತ್ತವೆ. ಹಾಗಾಗಿ ಖರ್ಚುಗಳು ಕೂಡ ಭಿನ್ನವಾ ಗಿರುತ್ತವೆ ಎಂದು ವಿದೇಶಾಂಗ ಇಲಾ ಖೆಯ ಶಿಷ್ಟಾಚಾರ ಅಧಿಕಾರಿ ರೋಹಿತ್ ರತೀಶ್ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೂಕ್ಷ್ಮ ವಿಷಯಗಳ ಕುರಿತು ಗೌಪ್ಯತೆ ಕಾಯ್ದುಕೊಳ್ಳಬೇಕು ಎಂದು ಆರ್‌ಟಿಐ ಕಾಯ್ದೆಯ ನಿಯಮ 8 (1) (ಸಿ) ಹೇಳು ತ್ತದೆ ಎಂದಿದ್ದಾರೆ.
ಆದರೆ, ಈ ವಾದವನ್ನು ಗಲಗಲಿ ಅವರು ಒಪ್ಪಿಲ್ಲ. ಪಾರದರ್ಶಕತೆಗೆ ಒತ್ತು ನೀಡಲಾಗುವುದು ಎಂಬ ತನ್ನ ಹೇಳಿಕೆಯನ್ನು ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮರೆತಿದೆ ಎಂದು ಕಿಡಿಕಾರಿದ್ದಾರೆ. ಈ ಮಾಹಿತಿ ಪಡೆಯಲು ಮತ್ತೆ ಅರ್ಜಿ ಸಲ್ಲಿಸುತ್ತೇನೆ ಎಂದೂ ಅವರು ತಿಳಿಸಿದ್ದಾರೆ.
-ಪ್ರಜಾವಾಣಿ