ಕರ್ನಾಟಕ

‘ಕೆಪಿಸಿಸಿ ಕಚೇರಿ ಕಟ್ಟಿರುವುದು ಕೆರೆಯೆ ಮೇಲೆ!’

Pinterest LinkedIn Tumblr

ಕಪಚಚ

ಬೆಂಗಳೂರು, ಮೇ 4 : ಬೆಂಗಳೂರು ನಗರದಲ್ಲಿ ಕೆರೆ ಒತ್ತುವರಿ ತೆರವುಗೊಳಿಸುತ್ತಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ‘ಜೆಸಿಬಿ ಘರ್ಜಿಸುವುದೇ ಆದರೆ, ಅದು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದಲೇ ಆರಂಭವಾಗಲಿ. ಕಚೇರಿ ನಿರ್ಮಾಣವಾಗಿರುವುದು ಕೆರೆಯಲ್ಲೇ’ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸುರೇಶ್ ಕುಮಾರ್, ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ ಮುಂತಾದ ನಾಯಕರು ಕೆರೆ ಒತ್ತುವರಿ ಬಗ್ಗೆ ಚರ್ಚೆ ನಡೆಸಲು ಸರ್ಕಾರ ವಿಶೇಷ ಅಧಿವೇಶವನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ‘ಕಾಂಗ್ರೆಸ್ ಕಚೇರಿ ಇರುವುದು ಮಿಲ್ಲರ್ಸ್ ಟ್ಯಾಂಕ್ ಪ್ರದೇಶದಲ್ಲಿ, ಕೆಂಪೇಗೌಡ ಬಸ್ ನಿಲ್ದಾಣ ಇರುವುದು ಕೆಂಪಾಂಬುದಿ ಕೆರೆಯಲ್ಲಿ. ಇದರ ಒತ್ತುವರಿ ಬಗ್ಗೆ ಸರ್ಕಾರ ಏನು ಹೇಳುತ್ತದೆ?’ ಎಂದು ಪ್ರಶ್ನಿಸಿದರು.

ನಮ್ಮಿಂದ ತಪ್ಪಾಗಿದೆ : ಸಾರಕ್ಕಿ, ಇಟ್ಟಮಡು ಕೆರೆ ಒತ್ತುವರಿ ತೆರವುಗೊಳಿಸಿದಾಗಲೇ ಬಿಜೆಪಿ ಹೋರಾಟ ಮಾಡಬೇಕಿತ್ತು, ಈಗ ವಿಳಂಬವಾಗಿದೆ. ನಮ್ಮಿಂದ ತಪ್ಪಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಸುರೇಶ್ ಕುಮಾರ್ ಅವರು, ಸಂತ್ರಸ್ತರ ಪರವಾಗಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತೇವೆ ಎಂದು ಭರವಸೆ ನೀಡಿದರು.

ವಿಶೇಷ ಅಧಿವೇಶನ ಕರೆಯಿರಿ : ಸರ್ಕಾರ ಕೆರೆ ಅಂಗಳದಲ್ಲಿರುವ ಮನೆಗಳನ್ನು ಒಡೆಯುವುದಾದರೆ ಅಲ್ಲಿರುವ ಸಂತ್ರಸ್ತರಿಗೆ ಮೊದಲು ಪುನರ್ ವಸತಿ ಕಲ್ಪಿಸಬೇಕು. ಈ ವಿಚಾರವಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.

ಒತ್ತುವರಿ ಕುರಿತು ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಚರ್ಚೆ ಮಾಡಲು ಸರ್ಕಾರ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಸುರೇಶ್ ಕುಮಾರ್ ಒತ್ತಾಯಿಸಿದರು.
-ದಟ್ಸ್ ಕನ್ನಡ

Write A Comment