ಅಂತರಾಷ್ಟ್ರೀಯ

ಇಬ್ಬರು ಅನಿವಾಸಿ ಭಾರತೀಯರಿಂದ 1,200 ಮನೆಗಳ ನಿರ್ಮಾಣ

Pinterest LinkedIn Tumblr

Nepal

ಕಠ್ಮಂಡು: ನೇಪಾಳದ ಭೂಕಂಪ ಪೀಡಿತ ಜಿಲ್ಲೆಗಳಲ್ಲಿ ತಕ್ಷಣವೇ 1,200 ಭೂಕಂಪ ಪ್ರತಿರೋಧಕ ಮನೆಗಳ ನಿರ್ಮಾಣದ ಕೊಡುಗೆಯೊಂದನ್ನು ಇಬ್ಬರು ಬಿಲಿಯಾಪತಿ ಅನಿವಾಸಿ ಭಾರತೀಯರು ಪ್ರಕಟಿಸಿದ್ದಾರೆ ಎಂದು ಲಂಡನ್‌ನಲ್ಲಿರುವ ನೇಪಾಳದ ದೂತಾವಾಸ ತಿಳಿಸಿದೆ.

ನಿರ್ಮಾಣ ತಂತ್ರಜ್ಞಾನದಲ್ಲಿ ಖ್ಯಾತಿ ಪಡೆದಿರುವ ಬ್ರಿಟನ್ ಮೂಲದ ಸಿಸ್ಮೊ ಕಂಪೆನಿಯ ಆಡಳಿತ ನಿರ್ದೇಶಕರಾಗಿರುವ ಮುಕೇಶ್ ಕುಮಾರ್ ಸೆಹಗಲ್ ಅವರು ಬ್ರಿಟನ್‌ಗೆ ನೇಪಾಳದ ಹಂಗಾಮಿ ರಾಯಭಾರಿಯಾಗಿರುವ ತೇಜ್‌ಬಹಾದೂರ್ ಚೆಟ್ರಿಯವರನ್ನು ಶುಕ್ರವಾರ ಭೇಟಿಯಾಗಿ ನೇಪಾಳದಲ್ಲಿ 1,000 ಭೂಕಂಪ ನಿರೋಧಕ ಮನೆಗಳನ್ನು ನಿರ್ಮಿಸಿಕೊಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಇನ್ನೋರ್ವ ಅನಿವಾಸಿ ಬಿಲಿಯಾಪತಿ ಶ್ರೀಪ್ರಕಾಶ್ ಲೋಹಿಯಾ ಎಂಬವರು ತಮ್ಮ ಲೋಹಿಯಾ ೌಂಡೇಶನ್ ಮೂಲಕ ನೇಪಾಳದ ಭೂಕಂಪ ಪೀಡಿತ ಗ್ರಾಮಗಳಲ್ಲಿ 200 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಲೋಹಿಯಾ(62) ಪ್ರಸಕ್ತ 24 ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ.

Write A Comment