ಅಂತರಾಷ್ಟ್ರೀಯ

ನೇಪಾಳ: ಪರಿಹಾರ ಕಾರ್ಯದಲ್ಲಿ ವಿಳಂಬಹೆಚ್ಚುತ್ತಿರುವ ಜನರ ಆಕ್ರೋಶ

Pinterest LinkedIn Tumblr

Nepal earthquake

ಕಠ್ಮಂಡು: ಭೀಕರ ಭೂಕಂಪ ಪೀಡಿತ ನೇಪಾಳದ ದುರ್ಗಮ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳು ತಲುಪುವಲ್ಲಿ ಇನ್ನೂ ವೇಗ ಕಡಿಮೆಯಾಗಿದ್ದು, ಸಂಕಷ್ಟಕ್ಕೀಡಾಗಿರುವ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ. ದುರ್ಗಮ ಪ್ರದೇಶಗಳನ್ನು ಸಂಪರ್ಕಿಸುವುದು ಇನ್ನೂ ಕಷ್ಟಸಾಧ್ಯವಾಗುತ್ತಿದ್ದು, ರಕ್ಷಣಾ ತಂಡಗಳು ಶಕ್ತಿಮೀರಿ ಶ್ರಮಿಸುತ್ತಿರುವುದಾಗಿ ಅಕಾರಿಗಳು ತಿಳಿಸಿದ್ದಾರೆ.

ಭೂಕಂಪ ಸಂಭವಿಸಿ ಒಂದು ವಾರವೇ ಕಳೆಯುತ್ತಿದ್ದರೂ ಸಂಕಷ್ಟಕ್ಕೀಡಾಗಿರುವ ಜನರಿಗೆ ಅತ್ಯಾವಶ್ಯಕ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ವಿಳಂಬವಾಗುತ್ತಿದ್ದು, ಜನರ ಆಕ್ರೋಶ ಮುಗಿಲುಮುಟ್ಟತೊಡಗಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಶುದ್ಧ ನೀರು ಹಾಗೂ ಶುದ್ಧ ಗಾಳಿಯ ಕೊರತೆ ಕಂಡು ಬಂದಿದ್ದು, ವ್ಯಾಪಕ ಕಾಯಿಲೆಗಳು ಹರಡುವ ಭೀತಿಯನ್ನೂ ವಿಶ್ವಸಂಸ್ಥೆಯ ಮಾನವೀಯ ನೆರವು ಕಾರ್ಯಾಚರಣೆ ತಂಡದ ಅಕಾರಿಗಳು ವ್ಯಕ್ತಪಡಿಸಿದ್ದಾರೆ.

ಪವತೊಕ್‌ನಂತಹ ದುರ್ಗಮ ಬೆಟ್ಟ ಪ್ರದೇಶಗಳಿಗೆ ಆಹಾರ ಹಾಗೂ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಇನ್ನೂ ಹೆಚ್ಚಿನ ಸಂಖ್ಯೆಯ ಹೆಲಿಕಾಪ್ಟರ್‌ಗಳ ಅಗತ್ಯವಿದೆ ಎಂದು ಅಕಾರಿಗಳು ಅಭಿಪ್ರಾಯಿಸಿದ್ದಾರೆ.

‘‘ರಕ್ಷಣಾ ಕಾರ್ಯವು ಶಾಂತಿಯ ವಾತಾವರಣದಲ್ಲಿ ನಡೆಯುತ್ತಿರುವಂತೆ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ನನಗನಿಸುತ್ತಿದೆ. ತುರ್ತು ಪರಿಸ್ಥಿತಿಯ ಬಿಕ್ಕಟ್ಟನ್ನು ಅರಿತುಕೊಂಡು ರಕ್ಷಣಾ ಕಾರ್ಯದ ವೇಗವು ತೀವ್ರಗೊಳ್ಳಬೇಕಾಗಿದೆ. ಕೆಲವು ಪ್ರಮುಖ ದಾನಿಗಳು ತಮ್ಮಲ್ಲಿರುವ ಪರಿಹಾರ ಸಾಮಗ್ರಿಗಳನ್ನು ಅಗತ್ಯವಿರುವಲ್ಲಿಗೆ ತಲುಪಿಸುವಲ್ಲಿ ಅಸಮರ್ಥರಾಗಿದ್ದಾರೆ’’ ಎಂದು ನೇಪಾಳದಲ್ಲಿರುವ ನಿವಾಸಿ ಸಮನ್ವಯಾಕಾರಿ ಜ್ಯಾಮಿ ಮೆಕ್‌ಗೋಲ್ಡ್‌ರಿಕ್ ಅಭಿಪ್ರಾಯಿಸಿದ್ದಾರೆ.

‘‘ನೇಪಾಳದಲ್ಲಿರುವ ಆಸ್ಪತ್ರೆಗಳು ಜನರಿಂದ ತುಂಬಿ ತುಳುಕತೊಡಗಿವೆ. ನೀರಿನ ಬರ ಎದುರಾಗಿದೆ. ಮೃತದೇಹಗಳು ಭಗ್ನಾವಶೇಷಗಳ ನಡುವೆಯೇ ಸಿಲುಕಿ ಕೊಳೆಯುತ್ತಿವೆ. ಸಂತ್ರಸ್ತರು ಇನ್ನೂ ಬಯಲಿನಲ್ಲೇ ವಾಸಿಸುತ್ತಿದ್ದಾರೆ. ನೇಪಾಳದ ವಿವಿಧ ಪ್ರದೇಶಗಳು ಈಗ ಕಾಯಿಲೆಗಳನ್ನು ಹುಟ್ಟುಹಾಕುವ ಕೇಂದ್ರಗಳಾಗಿ ಮಾರ್ಪಡುತ್ತಿವೆ’’ ಎಂದು ಯುನೆಸ್ಕೊದ ಅಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

Write A Comment