ಅಂತರಾಷ್ಟ್ರೀಯ

ಭೂಕಂಪದಲ್ಲಿ 1.60 ಲಕ್ಷ ಮನೆ ಧ್ವಂಸ: ವಿಶ್ವಸಂಸ್ಥೆ

Pinterest LinkedIn Tumblr

Nepal

ಕಠ್ಮಂಡು (ಪಿಟಿಐ): ಹಿಮಾಲಯನ್ ರಾಷ್ಟ್ರ ನೇಪಾಳದಲ್ಲಿ ಏಪ್ರಿಲ್ 25ರಂದು ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1.60 ಲಕ್ಷಕ್ಕೂ ಅಧಿಕ ಮನೆಗಳು ಧ್ವಂಸಗೊಂಡಿವೆ. ಇದು 1934ರಲ್ಲಿ ನಡೆದ ಭೀಕರ ಕಂಪನದ ವೇಳೆ ಧ್ವಂಸಗೊಂಡಿದ್ದ ಮನೆಗಳ ಸಂಖ್ಯೆಗಿಂತಲೂ ಎರಡು ಪಟ್ಟು ಹೆಚ್ಚು.

ವಿಶ್ವಸಂಸ್ಥೆಯ ಪ್ರಸ್ತುತ ವರದಿಯ ಪ್ರಕಾರ, ಭೀಕರ ಕಂಪನದಿಂದ ಅಕ್ಷರಶಃ ನಲುಗಿರುವ ಗೊರ್ಖಾ ಹಾಗೂ ಸಿಂಧುಪಲ್‌ಚೌಕ್‌ನಂಥ ಜಿಲ್ಲೆಗಳಲ್ಲಿ ಶೇಕಡ 90ರಷ್ಟು ಮನೆಗಳು ಧ್ವಂಸಗೊಂಡಿವೆ.

‘ಸರ್ಕಾರಿ ಅಂಕಿ–ಅಂಶಗಳ ಪ್ರಕಾರ, ಮೇ ತಿಂಗಳ 1ರ ತನಕ  1,60,786 ಮನೆಗಳು ಧ್ವಂಸಗೊಂಡಿದ್ದು, 1,43,642 ಮನೆಗಳು ಹಾನಿಗೊಂಡಿವೆ. ಆದರೆ, 5 ಲಕ್ಷದಷ್ಟು ಮನೆಗಳು ನಾಶಗೊಂಡಿವೆ ಎಂದು ಸರ್ಕಾರ ಹೇಳುತ್ತಿದೆ’ ಎಂದು ವರದಿ ತಿಳಿಸಿದೆ.

ನೇಪಾಳದಲ್ಲಿ ಏಪ್ರಿಲ್ 25ರಂದು 7.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7 ಸಾವಿರ ಮೀರಿದೆ. ಗಾಯಗೊಂಡವರ ಸಂಖ್ಯೆ 14,123 ದಾಟಿದೆ.

ಕಂಪಕದಿಂದ ಅಕ್ಷರಶಃ ನಲುಗಿರುವ ಸಿಂಧುಪಾಲ್‌ಚೌಕ್‌ ಜಿಲ್ಲೆಯೊಂದರಲ್ಲಿಯೇ 20 ಸಾವಿರ ಜನರು ಸತ್ತಿದ್ದಾರೆ. ಗೊರ್ಖಾ ಜಿಲ್ಲೆಯಲ್ಲಿ ನೂರಾರು ಜನರು ಅಸುನೀಗಿದ್ದಾರೆ.

ವರದಿಯೊಂದರ ಪ್ರಕಾರ, 81 ವರ್ಷಗಳ ಹಿಂದೆ ಅಂದರೆ 1934ರಲ್ಲಿ ಗ್ರೇಟ್‌ ನೇಪಾಳ –ಬಿಹಾರದಲ್ಲಿ ಸಂಭವಿಸಿದ ಭೂಕಂಪದಲ್ಲಿ 80,893 ಮನೆಗಳು ಧ್ವಂಸಗೊಂಡಿದ್ದವು.
-ಪ್ರಜಾವಾಣಿ

Write A Comment