ಅಂತರಾಷ್ಟ್ರೀಯ

ತನ್ನ ಮಾಜಿ ಗೆಳತಿಗಾಗಿ ಆಕೆಯ ಪ್ರೇಮಿಯ ಹೃದಯವನ್ನೇ ಕಚ್ಚಿ ತಿಂದ ಭೂಪ !

Pinterest LinkedIn Tumblr

2467crazed-cannibal-localvidscreencap2

ತನ್ನ ಮಾಜಿ ಗೆಳತಿಯ ಮಾತನ್ನು ಕೇಳಿದ ವ್ಯಕ್ತಿಯೊಬ್ಬ ಆಕೆಯ ಪ್ರೇಮಿಯನ್ನು ಕೊಂದು ಹೃದಯವನ್ನು ಕಿತ್ತು ತಿಂದ ಪೈಶಾಚಿಕ ಘಟನೆಯೊಂದು ಜಿಂಬಾಬ್ವೆಯಲ್ಲಿ ನಡೆದಿದ್ದು ಮನುಷ್ಯನ ಹೃದಯವನ್ನೇ ತಿಂದ ವ್ಯಕ್ತಿ ಜೈಲುಪಾಲಾಗಿದ್ದಾನೆ.

ಜೂನ್ 2014ರಲ್ಲಿ 35 ವರ್ಷದ ಆರೋಪಿ ಆಂಡ್ರ್ಯೂ ಚಿಮ್ಜೋಜಾ ಎಂಬಾತ ಕೆಪ್ಟೌನ್ ನಗರದ ಗುಗುಲೆಯಥು ಪ್ರದೇಶಯಲ್ಲಿ  ತನ್ನ ಮಾಜಿ ಗೆಳತಿಯ ಮನವಿ ಮೇರೆಗೆ ಆಕೆಯ ಪ್ರೇಮಿ ಬುಯಿಸೆಲೋ ಮನೋನಾನನ್ನು ಕೊಲೆ ಮಾಡಿದ್ದ. ಅದರ ಜತೆಗೆ ಆತನ ಹೃದಯವನ್ನು ಕಚ್ಚಿ ಎಳೆದು ತಿನ್ನುವ ಮೂಲಕ ರಾಕ್ಷಸ ಸ್ವರೂಪವನ್ನು ಪ್ರದರ್ಶಿಸಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಂಗದ ವಶಕ್ಕೊಪ್ಪಿಸಿದ್ದರು.

ಈ ನರರೂಪಿ ರಾಕ್ಷಸನ ವಿಚಾರಣೆ ನಡೆಸಿದ ಸಮಯದಲ್ಲಿ  ಆರೋಪಿ ತನ್ನ ಕೃತ್ಯದ ಬಗೆಗೆ ಒಪ್ಪಿಕೊಂಡಿದ್ದು ನಾನು ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ತನ್ನ ಗೆಳತಿ ಆಕೆಯ ಪ್ರಿಯಕರನನ್ನು ಕೊಲ್ಲಲು ಅನಿವಾರ್ಯತೆಯನ್ನು ಸೃಷ್ಟಿಸಿದ್ದು  ಆತನ ಹೃದಯವನ್ನು ತೋರಿಸಲು ಹೇಳಿದ್ದಳು ಹಾಗಾಗಿ ಈ ರೀತಿ ಮಾಡಬೇಕಾಯಿತು ಎಂದು ನ್ಯಾಯಾಲಯದಲ್ಲಿ ವಿವರಿಸಿದ್ದಾನೆ.

ಆತನ ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ಆತನನ್ನು ಮನೋರೋಗ ಪರೀಕ್ಷೆಗೆ ಒಳಪಡಿಸಲು ಅನುವು ಮಾಡಿಕೊಟ್ಟಿತ್ತು. ಆದರೆ ಆತನ ಮಾನಸಿಕ ಸ್ಥಿತಿ ದೃಢಪಟ್ಟಿದ್ದರಿಂದ 18 ವರ್ಷಗಳ ಸೆರೆವಾಸ ವಿಧಿಸಿ ಆದೇಶ ಹೊರಡಿಸಿದೆ.
-ಕೃಪೆ: ಕನ್ನಡ ದುನಿಯಾ

Write A Comment