ರಾಷ್ಟ್ರೀಯ

ಪ್ರೊಫೆಸರ್ ಕೈ ಕತ್ತರಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ 13 ಮಂದಿ ದೋಷಿಗಳು; ಕೋರ್ಟ್

Pinterest LinkedIn Tumblr

2601prof_joseph_college_sacked6_338x225

ಪ್ರವಾದಿ ಮೊಹಮ್ಮದ್ ಅವರನ್ನು ಅಪಮಾನಕಾರಿ ರೀತಿಯಲ್ಲಿ ಉಲ್ಲೇಖಿಸಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ್ದರು ಎಂಬ ಕಾರಣಕ್ಕೆ ಪ್ರೊಫೆಸರ್ ಒಬ್ಬರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಎರ್ನಾಕುಳಂ ಜಿಲ್ಲೆ ಎನ್ಐಎ ಕೋರ್ಟ್ ಗುರುವಾರ 13 ಮಂದಿ ದೋಷಿತರು ಎಂದು ತೀರ್ಪು ನೀಡಿದೆ.

ಏನಿದು ಘಟನೆ …?
ಬಿ.ಕಾಂ. ಎರಡನೇ ವರ್ಷದ ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಪ್ರೊಫೆಸರ್ ಜೋಸೆಫ್ ಎಂಬುವವರು  ದೇವರು ಮತ್ತು ಮೊಹಮ್ಮದ್ ನಡುವಿನ ಕಾಲ್ಪನಿಕ ಮಾತುಕತೆಯ ಭಾಗವೊಂದನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕೇಳಲಾಗಿತ್ತು.

ಹಾಗಾಗಿ ಈ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ ಮೊಹಮ್ಮದ್ ಎಂಬುವುದನ್ನು ಪ್ರವಾದಿ ಮೊಹಮ್ಮದ್ ಎಂದೇ ಪರಿಗಣಿಸಿದ ಕೆಲವು ಮುಸ್ಲಿಂ ಮೂಲಭೂತವಾದಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು 2010ರಲ್ಲಿ ಉಪನ್ಯಾಸಕನ ಮುಂಗೈ ಕತ್ತರಿಸಿ ತಮ್ಮ ದುರ್ವರ್ತನೆ ಪ್ರದರ್ಶಿಸಿದ್ದರು.

ಈ ಪ್ರಕರಣದ ವಿಚಾರಣೆ ಎನ್ಐಎ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಅಲ್ಲದೇ ಸಂಬಂಧ ತನಿಖೆಗೆ ನಡೆಸಿದ ಕೇರಳ ಅಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರ ನೀಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 18 ಮಂದಿಯನ್ನು ದೋಷಮುಕ್ತಗೊಳಿಸಿದ್ದು, 13 ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.
-ಕೃಪೆ; ಕನ್ನಡ ದುನಿಯಾ

Write A Comment