ಅಂತರಾಷ್ಟ್ರೀಯ

ಜನದಟ್ಟಣೆಯಿರುವ ರಸ್ತೆ ಮಧ್ಯೆ ಟ್ರ್ಯಾಕ್ಟರ್ ಓಡಿಸುತ್ತೆ ಈ ನಾಯಿ ..!

Pinterest LinkedIn Tumblr

Dog-Driving

ಲ್ಯಾನಾರ್ಕ್‌ಷೈರ್, ಏ.23- ಸ್ಕಾಟ್ಲೆಂಡಿನ ದಕ್ಷಿಣ ಲ್ಯಾನಾರ್ಕ್‌ಷೈರ್‌ನ ಅಬಿಂಗ್ಟನ್ ಎಂಬ ವಾಹನ ಹಾಗೂ ಜನದಟ್ಟಣೆ ನಗರದ ಜನತೆಗೆ ಅಚ್ಚರಿಯೋ ಅಚ್ಚರಿ..! ಅದಕ್ಕೆ ಕಾರಣ, ಮಜಬೂತಾದ ಕಪ್ಪು ಮಿಶ್ರಿತ ಕಂದುಬಣ್ಣದ ನಾಯಿಯೊಂದು ರಸ್ತೆಯ ಮೇಲೆ ಟ್ರ್ಯಾಕ್ಟರ್ ಓಡಿಸಿಕೊಂಡು ಹೊರಟಿತ್ತು..! ಇದು ಅಚ್ಚರಿಯಾದರೂ ಸತ್ಯ. ನಗರದ ಹೊರವಲಯದ ಕೃಷಿ ಜಮೀನಿನಿಂದ ಟ್ರ್ಯಾಕ್ಟರ್ ನಡೆಸಿಕೊಂಡು ಬಂದ ಈ ನಾಯಿ, ಡ್ರೈವರ್ ಆಸನದ ಮೇಲೆ ಕುಳಿತು, ತನ್ನ ಮುಂಗಾಲುಗಳಿಂದ ಸ್ಟಿಯರಿಂಗ್ ಹಿಡಿದುಕೊಂಡು ನೆಟ್ಟಗೆ ಹೈವೆಯಲ್ಲಿ ಪ್ರಯಾಣ ಬೆಳೆಸಿ ದಕ್ಷಿಣ ಲ್ಯಾನಾರ್ಕ್‌ಷೈರ್ ನಗರ ಪ್ರವೇಶಿಸಿತ್ತು.

ಸಾವಿರಾರು ವಾಹನ ಸವಾರರು, ಪಾದಚಾರಿಗಳು ಈ ಅದ್ಭುತ ಕಂಡು ಎಲ್ಲೆಡೆಯೂ ನಿಂತು ನಾಯಿ ಚಮತ್ಕಾರಕ್ಕೆ ಸಾಕ್ಷಿಯಾದರು. ಇದನ್ನು ಕಂಡ ಸಂಚಾರಿ ಪೊಲೀಸರು ರಸ್ತೆಯನ್ನೆಲ್ಲ ತೆರವುಗೊಳಿಸಿ ನಾಯಿ ಚಾಲಿತ ಟ್ರ್ಯಾಕ್ಟರ್‌ಗೆ ಹಾದಿ ಸುಗಮ ಮಾಡಿಕೊಟ್ಟರು. ಇದು ನಡೆದದ್ದು ನಗರದ ಎಂ.74(ಎನ್) ಜೆ-13 ರಸ್ತೆಯಲ್ಲಿ. ನಾಯಿ ತುಂಬಾ ಚೆನ್ನಾಗಿ ಚಾಲನೆ ಮಾಡುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ಈಗ ಎಲ್ಲರೂ ನಾನೇಕೆ ನಮ್ಮ ಸಾಕು ಪ್ರಾಣಿಗಳಿಗೆ ಡ್ರೈವಿಂಗ್ ಕಲಿಸಿಕೊಡಬಾರದು ಎಂದು ಚಿಂತಿಸುತ್ತಿದ್ದರಂತೆ. ಈಗ ಮುಖ್ಯವಾಗಿ, ಈ ನಾಯಿಗೆ ಡ್ರೈವಿಂಗ್ ಲೈಸೆನ್ಸ್ ಕೊಡುವುದು ಬಿಡುವುದು ಸಾರಿಗೆ ಅಧಿಕಾರಿಗಳ ವಿವೇಚನೆಗೆ ಬಿಟ್ಟದ್ದು..!ಸದ್ಯ ಈ ಡ್ರೈವರ್ ನಾಯಿ ಲೈಸೆನ್ಸ್‌ಗೆ ಅಪ್ಲೈ ಮಾಡಿದೆಯೋ ಇಲ್ವೋ ಗೊತ್ತಿಲ್ಲ.

Write A Comment