ರಾಷ್ಟ್ರೀಯ

ನಿರ್ಭಯಾಳಿಗೆ ಚುಚ್ಚಿದ್ದು ರಾಡ್ ಅಲ್ಲ ಸ್ಕ್ರೂಡ್ರೈವರ್

Pinterest LinkedIn Tumblr

mukesh-Singh

ನವದೆಹಲಿ: ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದ್ದ ನಾಲ್ವರು ಕೀಚಕರು ಸಾಕ್ಷ್ಯ ನಾಶ ಮಾಡಲು ಕ್ರಿಮಿನಲ್ ಯೋಚನೆ ರೂಪಿಸಿದ್ದರು. ಡಿಎನ್‍ಎ ಪರೀಕ್ಷೆ ವೇಳೆ ಕೂಡ ಯಾವುದೇ ರೀತಿಯ ಸಾಕ್ಷಿ ಸಿಗದಂತಾಗಲು ಅತ್ಯಾಚಾರದ ಬಳಿಕ ಆಕೆಯ ಗುಪ್ತಾಂಗಕ್ಕೆ ಬಟ್ಟೆ ಸುತ್ತಿದ ರಾಡ್ ತೂರಿಸಿ ವೀರ್ಯ ಒರೆಸಿ ಹಾಕಲು ಮುಂದಾಗಿದ್ದರು ಎಂದು ಹೇಳಲಾಗಿತ್ತು.

ಆದರೆ ಹೊಸವಾದದ ಪ್ರಕಾರ ಅದಕ್ಕೆ ಸ್ಕ್ರೂ ಡ್ರೈವರ್ ಬಳಸಿದ್ದೆವು ಎದಿರುವ ಮುಖೇಶ್, ಉಳಿದಿದ್ದ ಬಟ್ಟೆಯನ್ನು ತೆಗೆಯಲು ಪ್ರಯತ್ನಿಸಿದಾಗ ಕರುಳು ಹೊರ ಬಂದಿತ್ತು’ ಎಂದು

ಹೇಳಿಕೊಂಡಿದ್ದಾನೆ. ಸದ್ಯ ನಿಷೇಧಕ್ಕೆ ಒಳಗಾಗಿರುವ ನಿರ್ಮಾಪಕಿ ಲೆಸ್ಲಿ ಉಡ್ವಿನ್ ರ ‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರದ ಮೂಲ ಪ್ರತಿಗೆ ನೀಡಿರುವ ಸಂದರ್ಶನದಲ್ಲಿ ಈ ಅಂಶ

ಉಲ್ಲೇಖಿಸಿದ್ದಾನೆ. ಆದರೆ ಸಾಕ್ಷ್ಯಚಿತ್ರಕ್ಕಾಗಿ ನಡೆಸಲಾಗಿರುವ ಸಂದರ್ಶನವನ್ನು ಅಳಿಸಿ ಹಾಕಲಾಗಿದೆ.

ಸಾಕ್ಷ್ಯಚಿತ್ರ ನಿರ್ಮಾಣದ ವೇಳೆ ಉಡ್ವಿನ್ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಪಂಜಾಬ್ ಮತ್ತು ಹೈಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮುಕೇಶ್ ಮುದ್ಗಲ್‍ಗೆ ಬರೆದಿದ್ದ ಪತ್ರದಲ್ಲಿ ಈ ಅಂಶವನ್ನು ಉಡ್ವಿನ್ ಉಲ್ಲೇಖಿಸಿದ್ದರು. ಆದರೆ, ಈ ಅಂಶ ದೆಹಲಿಯ ಸ್ಥಳೀಯ ಕೋರ್ಟ್ ಹೈಕೋರ್ಟ್ ತೀರ್ಪಿನ ವ್ಯಾಪ್ತಿಗೆ ಬರುತ್ತದೆಯೇ ಎಂದು ನ್ಯಾ.ಪಸಾಯತ್ ಬಳಿ ಉಡ್ವಿನ್ ಪ್ರಶ್ನಿಸಿದ್ದರು. ನ್ಯಾ.ಪಸಾಯತ್‍ಗೆ ಬರೆದ ಪತ್ರದ ಪ್ರಕಾರ ಮುಕೇಶ್ ನ ಹೊಸ ಹೇಳಿಕೆ ಸೆಷನ್ಸ್ ಕೋರ್ಟ್‍ನಲ್ಲಿ ಪ್ರಾಮುಖ್ಯವನ್ನೇ ಪಡೆದಿಲ್ಲ. ಪ್ರಾಸಿಕ್ಯೂಷನ್ ಎರಡು ರಾಡ್ ಗಳನ್ನು ಬಳಸಲಾಗಿತ್ತು ಎಂದು ಹೇಳಿಕೊಂಡಿತ್ತು.

ಸಾಕ್ಷ್ಯ ನಾಶವೇ ಉದ್ದೇಶ
ಮುಕೇಶ್ ತಮಗೆ ನೀಡಿದ ಹೇಳಿಕೆ ವೇಳೆ ಅಪರಾಧ ಕೃತ್ಯದ ಬಗ್ಗೆ ಆರೋಪಿಗಳಿಗೆ ಯಾವುದೇ ಭಯವಿರಲಿಲ್ಲ. ಆತ ತನ್ನ ಗೆಳೆಯರ ಜತೆ ಸೇರಿ ಏನೇನು ಮಾಡಿದ ಎನ್ನುವುದನ್ನು ವಿವರಿಸಿಕೊಂಡು ಹೋಗುತ್ತಾನೆ. ಅತ್ಯಾಚಾರ ನಡೆಸುವ ಸಮಯದಲ್ಲಿ ಅವರ ಮನಸ್ಥಿತಿ ಬರೀ ಆಕೆಯನ್ನು ಘಾಸಿಗೊಳಿಸುವುದೇ ಆಗಿತ್ತು. ನಂತರದ ಸಮಯದಲ್ಲಿ ಸಾಕ್ಷ್ಯ ನಾಶ ಮಾಡುವ ಉದ್ದೇಶ ಹೊಂದಿದ್ದರು.

ಅಭಿಮತ
ಸುಪ್ರೀಂ ಕೋರ್ಟ್ ಈ ಹಂತದಲ್ಲಿ ಹೊಸ ಸಾಕ್ಷ್ಯವನ್ನು ಪರಿಗಣಿಸುವ ಸಾಧ್ಯತೆ ಇದ್ದರೂ ಆ ಬಗ್ಗೆ ಗಮನ ಹರಿಸದು ಎಂದು ನ್ಯಾ.ಪಸಾಯತ್ ತಿಳಿಸಿದ್ದಾರೆ. ಸ್ಕ್ರೂಡ್ರೈವರ್ ಬಳಸಿದ್ದ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡಬೇಕು. ಆ ವಸ್ತುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸದ ಹೊರತೂ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Write A Comment