ಅಂತರಾಷ್ಟ್ರೀಯ

ಚರಂಡಿ ಅಗೆದಾಗ ಸಿಕ್ಕಿದ್ದು ಡೈನೋಸಾರ್ ಮೊಟ್ಟೆ !

Pinterest LinkedIn Tumblr

dino

ಭೂಮಿಯಲ್ಲಿ ಚಿನ್ನದ ನಾಣ್ಯಗಳ ರಾಶಿ ಸಿಗುವುದನ್ನು ನೋಡಿದ್ದೀರಿ, ಇನ್ನು ಡೈನೋಸಾರ್ ನಂತಹ ಪ್ರಾಣಿಗಳ ಪಳೆಯುಳಿಕೆ ಸಿಕ್ಕ ಬಗೆಗೂ ಕೇಳಿದ್ದೀರಿ. ಆದರೆ ಚೀನದಲ್ಲೀಗ ಡೈನೋಸಾರ್ ಮೊಟ್ಟೆ ಸಿಕ್ಕಿದ್ದು ಅಚ್ಚರಿಗೆ ಕಾರಣವಾಗಿದೆ.

ಹೌದು. ಚೀನಾದ ದಕ್ಷಿಣಪೂರ್ವ ಭಾಗದ ಹ್ಯುಯಾನ್ ಪ್ರಾಂತ್ಯದಲ್ಲಿ ರಸ್ತೆ ಬದಿಯಲ್ಲಿ ಒಳಚರಂಡಿ ಕಾಮಗಾರಿಯ ಕೆಲಸ ನಡೆಯುತಿತ್ತು. ಈ ಸಮಯದಲ್ಲಿ  ಪೈಪ್ ಅಳವಡಿಸುವ ವೇಳೆ ಕಾರ್ಮಿಕರಿಗೆ ಭಾರೀ ಗಾತ್ರದ ಮೊಟ್ಟೆಗಳು ಅಭಿಸಿದ್ದು ಈ ಗಜಗಾತ್ರದ ಮೊಟ್ಟೆ ಕಂಡ ಕಾರ್ಮಿಕರು ಒಮ್ಮೆಲೇ ದಂಗಾಗಿದ್ದಾರೆ.

ಡೈನೋಸಾರ್ ಗಳದ್ದು ಎನ್ನಲಾದ ಈ ದೈತ್ಯಕಾರದ 43 ಮೊಟ್ಟೆಗಳು ಒಂದೇ ಕಡೆ ಸಿಕ್ಕಿದ್ದು ಇದೀಗ ಕುತೂಹಲದ ಕೇಂದ್ರವಾಗಿದೆ. ಅಲ್ಲದೇ ಈ 43 ಮೊಟ್ಟೆಗಳಲ್ಲಿ 19 ಮೊಟ್ಟೆಗಳು ಒಡೆಯದೇ ಇದ್ದು ಇನ್ನುಳಿದವು ಒಡೆದಿದ್ದವು ಎನ್ನಲಾಗಿದೆ. ಪ್ರತಿಯೊಂದು ಮೊಟ್ಟೆಯೂ  10 ರಿಂದ 12 ಸೆಂಟಿಮೀಟರ್ ವ್ಯಾಸವನ್ನು ಹೊಂದಿದ್ದು ಇದನ್ನು ಹೆಚ್ಚಿನ ಸಂಶೋಧನೆಗಾಗಿ ಈಗಾಗಲೇ ಚೀನಾದಲ್ಲಿರುವ ಹ್ಯೂಯಾನ್ ಡೈನೋಸಾರ್ ಮ್ಯೂಸಿಯಂಗೆ ತಜ್ಞರು ತೆಗೆದುಕೊಂಡು ಹೋಗಿದ್ದಾರೆ. ಭಾರೀ ಗಾತ್ರದ ಮೊಟ್ಟೆಗಳು ಸಿಕ್ಕಿದ ಕಾರಣ ಈಗ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದು, ಈಗ ಅಷ್ಟು ಜಾಗವನ್ನು ಭೂ ವೈಜ್ಞಾನಿಕ ರಕ್ಷಿತ ವಲಯ ಎಂದು ಗುರುತಿಸಲಾಗಿದ್ದು ಸಂಶೋಧಕರು ಸಂಶೋಧನೆ ಮಾಡಲಿದ್ದಾರಂತೆ.

ಚೀನಾದಲ್ಲಿ ಈ ಹಿಂದೆ ಡೈನೋಸಾರ್ ಇತ್ತು ಎಂದು ಹೇಳಲಾಗುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ  1996ರಿಂದ ಇಲ್ಲಿಯವರೆಗೆ 17 ಸಾವಿರಕ್ಕೂ ಅಧಿಕ ಸಂಖ್ಯೆಯ ದೊಡ್ಡ ಗಾತ್ರದ ಮೊಟ್ಟೆಗಳು ಸಿಕ್ಕಿದ್ದು, ಈ ಮೊಟ್ಟೆಗಳು ಡೈನೋಸಾರ್ ಮ್ಯೂಸಿಯಂನಲ್ಲಿ ಸಂಗ್ರಹಿಸಲಾಗಿದೆ.

Write A Comment