ಕರ್ನಾಟಕ

ನಿಗದಿಯಾಗಿದ್ದ ವರನ ತಿರಸ್ಕರಿಸಿ ಆತನ ಸಹೋದರನ ಕೈ ಹಿಡಿದ ವಧು..!

Pinterest LinkedIn Tumblr

8969250_1indian_wedding_photography_2-600x341

ವರನೊಬ್ಬ ಇನ್ನೇನೂ ತಾಳಿ ಕಟ್ಟಬೇಕೆನ್ನುವಷ್ಟರಲ್ಲೇ ಮದುವೆ ಮಂಟಪಕ್ಕೆ ನುಗ್ಗಿದ ಯುವತಿಯೊಬ್ಬಳು ಆತನಿಗೆ ಯಕ್ಕಾಮಕ್ಕಾ ಬಾರಿಸಿದ್ದು, ಇದರಿಂದಾಗಿ ವಿವಾಹವೇ ರದ್ದಾಗಿ ಈತನನ್ನು ವರಿಸಬೇಕಿದ್ದ ವಧು ಆತನ ಸಹೋದರನನ್ನು ವಿವಾಹವಾಗಿದ್ದಾಳೆ.

ವರ ಈ ಮೊದಲೇ ಒಬ್ಬಾಕೆಯೊಂದಿಗೆ ವಿವಾಹವಾಗಿದ್ದು, ಅದನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಲು ಮುಂದಾಗಿದ್ದ. ಈ ವಿಷಯ ಅರಿತ ಈತನೊಂದಿಗೆ ವಿವಾಹವಾಗಿದ್ದ ಯುವತಿ ಮದುವೆ ಮಂಟಪದಲ್ಲೇ ಆತನಿಗೆ ಸರಿಯಾಗಿ ಬಾರಿಸಿದ್ದಾಳೆ. ತನ್ನೊಂದಿಗೆ ಈಗಾಗಲೇ ಮದುವೆಯಾಗಿರುವ ಈತ ಮತ್ತೊಂದು ಮದುವೆಯಾದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಸಿ ಅಲ್ಲಿಂದ ತೆರಳಿದ್ದಾಳೆ.

ಆಕೆ ಅತ್ತ ಹೋಗುತ್ತಿದ್ದಂತೆಯೇ ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವಧು, ಒಬ್ಬಳೊಂದಿಗೆ ವಿವಾಹವಾಗಿರುವ ಈತನನ್ನು ವರಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದು, ಇದಕ್ಕೆ ಕುಟುಂಬಸ್ಥರೂ ಬೆಂಬಲಿಸಿದ್ದಾರೆ. ಪಂಚಾಯಿತಿ ನಡೆಸಿದ ಹಿರಿಯರು ಅಂತಿಮವಾಗಿ ವರನ ಕಿರಿಯ ಸಹೋದರನ ಜೊತೆ ವಧುವಿನ ವಿವಾಹ ನಡೆಸುವ ತೀರ್ಮಾನ ಪ್ರಕಟಿಸಿದ್ದಾರೆ. ಇದಕ್ಕೆ ಎರಡೂ ಕಡೆಯವರು ಒಪ್ಪಿದ್ದು ವರನ ಕಿರಿಯ ಸಹೋದರನೊಂದಿಗೆ ವಧುವಿನ ವಿವಾಹ ನೆರವೇರಿಸಲಾಗಿದೆ.

Write A Comment