ಅಂತರಾಷ್ಟ್ರೀಯ

ಮಿಲಿ ಮೀಟರ್ ಗಾತ್ರದ ಕಲ್ಲುಗಳಿಂದ ಭೂಮಿ ಸೃಷ್ಟಿ

Pinterest LinkedIn Tumblr

Earth-was-formed-by-millimeter-sized-stones-claims-study

ವಾಷಿಂಗ್ಟನ್: ಭೂಮಿಯ ಹುಟ್ಟಿಗೆ ಸಂಬಂಧಿಸಿ ವಿಜ್ಞಾನಿಗಳು ಹೊಸ ವಾದವೊಂದು ಮುಂದಿಟ್ಟಿದ್ದಾರೆ.

ಭೂಮಿಯು ಮಿಲಿಮೀಟರ್ ಗಾತ್ರದ ಕಲ್ಲುಗಳಿಂದ ನಿರ್ಮಾಣವಾಗಿದೆ. ಒಂದು ರೀತಿಯಲ್ಲಿ ಆಕಾಶಕಾಯಗಳ ರೀತಿಯಲ್ಲೇ ಭೂಮಿ ಜನನ ತಾಳಿದೆ. ಸೂರ್ಯನ ಸುತ್ತ ತಿರುಗು ಹಾಕುತ್ತಿದ್ದ ಲಕ್ಷಾಂತರ ಮಿಲಿಮೀಟರ್ ಗಾತ್ರದ ಕಣಗಳು ಭೂಮಿಯ ಉಗಮಕ್ಕೆ ಕಾರಣವಾಗಿವೆ.

ಸೂರ್ಯನ ಸುತ್ತ ಸುತ್ತುತ್ತಿದ್ದ ಕ್ಷುದ್ರಗ್ರಹಗಳ ಭಾಗಗಳು ನಿಯಮಿತವಾಗಿ ಊಲ್ಕೆಯಾಗಿ ಭೂಮಿಗೆ ಅಪ್ಪಳಿಸುತ್ತಿದ್ದವು. ಈ ಭಾಗಗಳು ಮಿಲಿಮೀಟರ್ ಗಾತ್ರದ ದುಂಡಗಿನ ಕಲ್ಲುಗಳನ್ನು ಹೊಂದಿರುತ್ತಿದ್ದವು. ಇವುಗಳನ್ನು ಚೊಂಡ್ರೂಲ್ಸ್ ಎಂದು ಕರೆಯಲಾಗುತ್ತದೆ.

ಈ ಸಣ್ಣ ತುಣುಕುಗಳೇ ಸೌರಮಂಡಲದ ಮೂಲಭಾಗಗಳಾಗಿವೆ ಎಂದು ಸ್ವೀಡನ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯಲ್ಲಿ ತಿಳಿಸಲಾಗಿದೆ. 100 ಮಿಲಿಯನ್ ವರ್ಷಗಳ

ಹಿಂದೆ ಮಂಗಳನ ಗಾತ್ರದ ಪ್ರೊಟೋಪ್ಲ್ಯಾನೆಟ್ ನಡುವೆ ಘರ್ಷಣೆಗೆ ಉಂಟಾಗಿ ಭೂಮಿಯ ಸೃಷ್ಟಿಯಾಗಿತ್ತು ಎಂದು ಈ ಹಿಂದಿನ ಸಂಶೋಧನೆ ಹೇಳಿತ್ತು.

ಪ್ರೊಟೋಪ್ಲಾನೆಟ್ ಗಳು ಆಕಾಶಕಾಯಗಳಿಂದ ಚಾಂಡ್ರೋಲ್ಸ್ ಗಳನ್ನು ಸೆರೆ ಹಿಡಿದು ಉಂಟಾಗಿರಬಹುದು ಎಂದು ಕೋಪನ್ ಹೇಗನ್ ವಿವಿಯ ಮಾರ್ಟಿನ್ ಬಿಝಾರೋ ಹೇಳುತ್ತಾರೆ. ಈ ಸಂಶೋಧನಾ ವರದಿಯು ಜರ್ನಲ್ ಸೈನ್ಸ್ ಅಡ್ವಾನ್ಸಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Write A Comment