ಅಂತರಾಷ್ಟ್ರೀಯ

ಶಾರ್ಕ್ ದಾಳಿಯಿಂದ 13 ವರ್ಷದ ಬಾಲಕ ಸಾವು

Pinterest LinkedIn Tumblr

Shorck-Fish-Attack

ಲೆಸ್ ಐಗ್ರೇಟ್ಸ್ , ಏ.13: ಶಾರ್ಕ್ ಮೀನೊಂದರ ದಾಳಿಯಿಂದ 13 ವರ್ಷದ ಬಾಲಕನೊಬ್ಬ ಸಾವಿಗೀಡಾಗಿರುವ ಘಟನೆ ಫ್ರೆಂಚ್ ಇಂಡಿಯನ್ ಓಷನ್ ದ್ವೀಪದಲ್ಲಿ ನಿನ್ನೆ ಜರುಗಿದೆ. 2011ರಿಂದ ಇಲ್ಲಿಯವರೆಗೆ ಈ ದ್ವೀಪದಲ್ಲಿ ಶಾರ್ಕ್ ಮೀನಿನ ದಾಳಿಗೆ ಒಟ್ಟು 7 ಮಂದಿ ಬಲಿಯಾಗಿದ್ದಾರೆ ಎಂದು ಲಾ-ರೆ ಯೂನಿಯನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ದ್ವೀಪದಲ್ಲಿ ಈ ಬಾಲಕ ಬೋಟಿಂಗ್ ಮಾಡುತ್ತಿದ್ದಾಗ ಶಾರ್ಕ್ ಅವನ ಮೇಲೆ ಹಠಾತ್ತನೆ ದಾಳಿ ನಡೆಸಿ ಕೊಂದು ಹಾಕಿದೆ. ಇಲ್ಲಿಯವರೆಗೆ 16 ಶಾರ್ಕ್ ಮೀನುಗಳು ಈ ರೀತಿಯ ದಾಳಿ ನಡೆಸಿದ್ದು , ಸಂಬಂಧಪಟ್ಟ ಅಧಿಕಾರಿಗಳು ಈ ಪ್ರದೇಶಕ್ಕೆ ಯಾರು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ಕ್ರಮ 2016ರವರೆಗೂ ಮುಂದುವರೆಯಲಿದೆಯಾದರೂ ಕೆಲವರು ಕದ್ದು ಮುಚ್ಚಿ ಇಂತಹ ಸಾಹಸಕ್ಕೆ ಮುಂದಾಗುವ ಮೂಲಕ ತಮ್ಮ ಪ್ರಾಣಕ್ಕೆ ತಾವೇ ಮುಳುವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Write A Comment