ಅಂತರಾಷ್ಟ್ರೀಯ

ಡೈನೋಸಾರ್ ಪಳೆಯುಳಿಕೆ ಪತ್ತೆ ಹಚ್ಚಿದ 5 ವರ್ಷದ ಪೋರ

Pinterest LinkedIn Tumblr

Boy_dinosaur

ವಾಷಿಂಗ್ಟನ್, ಏ.13: ವಿಶ್ವದ ವಿಸ್ಮಯಗಳಲ್ಲಿ ಒಂದಾದ ಸುಮಾರು 1000 ಮಿಲಿಯನ್ ವರ್ಷಗಳ ಹಳೆಯ ಡೈನೋಸಾರ್ ಸಂತತಿ ಬಗ್ಗೆ ಅನೇಕ ಸಂಶೋಧನೆಗಳು ಈಗಲೂ ಮುಂದುವರೆದಿವೆ. ಐದು ವರ್ಷದ ಬಾಲಕನೊಬ್ಬ ಅಮೆರಿಕದ ಟೆಕ್ಸಾಸ್‌ನ ಶಾಪಿಂಗ್ ಮಾಲ್‌ವೊಂದರ ಹಿಂದೆ ಡೈನೋಸಾರ್ ಪಳಿಯುಳಿಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮ್ಯಾನ್ಸ್ ಫೀಲ್ಡ್‌ನ ಶಾಪಿಂಗ್ ಮಾಲ್‌ನ ಹಿಂಭಾಗದಲ್ಲಿರುವ ದಲಾಸ್ ಮೃಗಾಲಯದಲ್ಲಿ ಬಾಲಕ ಬ್ರೈಸ್ ಆಟವಾಡುವಾಗ ಈ ಕುತೂಹಲಕಾರಿ ಅಂಶವನ್ನು ತನ್ನ ತಂದೆ ಟಿಮ್‌ಗೆ ತೋರಿಸಿದ್ದಾನೆ. ನಶಿಸಿ ಹೋಗಿರುವ ಡೈನಾಸಾರ್ಸ್ಯ ಬಗ್ಗೆ ಮತ್ತಷ್ಟು ಸಂಶೋಧನೆ ಆರಂಭಿಸಿರುವ ಸದರನ್ ಮೆಥೋಡಿಸ್ಟ್ ವಿಶ್ವವಿದ್ಯಾನಿಲಯ ಈ ಬಾಲಕ ಪತ್ತೆ ಹಚ್ಚಿದ ಪಳಿಯುಳಿಕೆಗಳ ಬಗ್ಗೆಯೂ ಪರಿಶೀಲನೆ ಮುಂದುವರೆಸಿದ್ದಾರೆ.

ನೆಲ ಅಗೆಯುವ ಸಂದರ್ಭದಲ್ಲಿ ಬಾಲಕ ಬ್ರೈಸ್‌ಗೆ ಈ ಪಳಿಯುಳಿಕೆಗಳು ಲಭಿಸಿದ್ದು , ವಿಶ್ವವಿದ್ಯಾಲಯದ ಸಂಶೋಧಕ ಮೈಕೆಲ್ ಪೋಲ್‌ಸಿನ್ ಅವರು ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿದ್ದಾರೆ. ಡೈನೋಸಾರ್‌ನ ಮೂಳೆಗಳನ್ನು ಈ ಸ್ಥಳದಿಂದ ಸಂಗ್ರಹಿಸಿದ್ದು , ಅದನ್ನು ವೈಜ್ಞಾನಿಕ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಡೈನೋಸಾರ್ಸ್್ ಈ ಪ್ರದೇಶದಲ್ಲಿ ತುಂಬಾ ವಿರಳವಾಗಿದ್ದವು ಎಂದು ಹೇಳಿರುವ ಮೈಕೇಲ್ ಈ ಮೂಳೆಗಳನ್ನು ವಿಶ್ವವಿದ್ಯಾನಿಲಯದಲ್ಲಿ ರಾಸಾಯನಿಕಗಳ ಮೂಲಕ ಸ್ವಚ್ಛಗೊಳಿಸಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಬಾಲಕ ಬ್ರೈಸ್ ತನ್ನ ತಂದೆ ಜತೆ ಮೃಗಾಲಯದಲ್ಲಿ ಆಟವಾಡುತ್ತಿದ್ದಾಗ ತನಗೆ ಕಂಡು ಬಂದ ಮೂಳೆಯನ್ನು ಆಶ್ಚರ್ಯದಿಂದ ನೋಡಿದ್ದಾನೆ. ಅದು ಗಾತ್ರ ಮತ್ತು ಆಕಾರದಲ್ಲಿ ಅವನನ್ನು ಆಕರ್ಷಿಸಿದ್ದರಿಂದ ಇದು ಯಾವುದೋ ಮಹತ್ವದ ಪ್ರಾಣಿಯ ಮೂಳೆ ಇರಬಹುದು ಎಂದು ಬ್ರೈಸ್ ನಿರ್ಧರಿಸಿದ್ದಾನೆ.

Write A Comment