ರಾಷ್ಟ್ರೀಯ

ಮದುವೆಯಾಗದೆ ಒಟ್ಟಿಗಿದ್ದರೂ ಅವರು ಸತಿ-ಪತಿಗಳೇ..!

Pinterest LinkedIn Tumblr

Living-Together

ನವದೆಹಲಿ,ಏ.13: ಪರಸ್ಪರ ಸಮ್ಮತಿ ಮೇರೆಗೆ ಅವಿವಾಹಿತರು ಒಟ್ಟಿಗೆ ಜೀವನ ಮಾಡುತ್ತಿದ್ದರೆ ಅವರನ್ನು ಕಾನೂನಿನ ಪ್ರಕಾರ ಸತಿ-ಪತಿಗಳೆಂದೇ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಂ.ವೈ.ಇಕ್ಬಾಲ್ ಮತ್ತು ಅಮಿತವ ರಾಯ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದೆ. ಅವಿವಾಹಿತವಾಗಿದ್ದರೂ ಜೋಡಿಗಳಿಬ್ಬರು ಒಟ್ಟಿಗೆ ಜೀವನ ಮಾಡುತ್ತಿದ್ದರೆ ಅವರನ್ನು ಪತಿ-ಪತ್ನಿಯರೆಂದೇ ಪರಿಗಣಿಸಬೇಕು. ಅಲ್ಲದೆ ಪತಿ ತೀರಿಕೊಂಡ ನಂತರ ಆತನ ಆಸ್ತಿಯಲ್ಲಿ ಮಹಿಳೆಯು ಜೀವನಾಂಶ ಪಡೆಯಲು ಅರ್ಹಳು ಎಂದು ಪೀಠ ಹೇಳಿದೆ.

ಧಾರ್ಮಿಕ ವಿಧಿವಿಧಾನಗಳ ಪ್ರಕಾರವೇ ಮದುವೆಯಾದರೆ ಅದನ್ನು ಸಿಂಧು ಎಂದು ಪರಿಗಣಿಸಬೇಕಾಗಿಲ್ಲ. ವಿವಾಹವಾಗದೆ ಒಟ್ಟಿಗೆ ಜೀವನ ಮಾಡುತ್ತಿದ್ದರೆ ಅಂಥವರನ್ನು ಕಾನೂನಿನಂತೆ ಗಂಡ-ಹೆಂಡತಿ ಎಂದು ಕರೆಯಲು ತೊಂದರೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಿರುವ ನ್ಯಾಯಪೀಠ ಪತಿ ತೀರಿಕೊಂಡ ನಂತರ ಪತ್ನಿಗೆ ಜೀವನಾಂಶ ನೀಡಲೇಬೇಕು. ಒಟ್ಟಿಗೆ ಜೀವನ ಸಾಗಿಸುತ್ತಿದ್ದರೂ ವಿವಾಹವಾಗಿಲ್ಲ ಎಂಬ ಕಾರಣಕ್ಕೆ ಜೀವನಾಂಶ ನೀಡಲು ತಿರಸ್ಕರಿಸಬಾರದು ಎಂದು ಆದೇಶ ಮಾಡಿದ್ದಾರೆ.

Write A Comment