ಅಂತರಾಷ್ಟ್ರೀಯ

ಟ್ಯುನಿಷಿಯಾ: ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಗುಂಡು; ಉಗ್ರರ ದಾಳಿಗೆ 21 ಬಲಿ

Pinterest LinkedIn Tumblr

pvec19mar15jTUNISIA2

ಟ್ಯೂನಿಸ್‌: ಟ್ಯುನಿಷಿಯಾ ರಾಜಧಾನಿಯಲ್ಲಿರುವ ಪ್ರಮುಖ ವಸ್ತುಸಂಗ್ರಹಾಲಯಕ್ಕೆ ನುಗ್ಗಿದ ಇಬ್ಬರು ಶಸ್ತ್ರಧಾರಿ ಉಗ್ರರು ಯದ್ವಾತದ್ವಾ ಗುಂಡು ಹಾರಿಸಿದ್ದು ಕನಿಷ್ಠ 21 ಜನರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯ ಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹಲವರು ವಿದೇಶಿಯರು ಮತ್ತು ಇಬ್ಬರು ಉಗ್ರರು ಸೇರಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಈ ದೇಶದ ಪ್ರವಾಸಿ ತಾಣವೊಂದರ ಮೇಲೆ ನಡೆದ ಮೊದಲ ದಾಳಿ ಇದು. ದಾಳಿ ನಡೆಸಿದವರು ಯಾರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಉಗ್ರರು ಯಾರನ್ನಾ ದರೂ ಒತ್ತೆ ಇರಿಸಿ ಕೊಂಡಿದ್ದಾರೆಯೇ ಎಂಬುದೂ ತಿಳಿದು ಬಂದಿಲ್ಲ. ಉಗ್ರರು ದಾಳಿ ನಡೆಸಿದ ತಕ್ಷಣವೇ ಭದ್ರತಾ ಪಡೆಗಳು ದಾಳಿಗೆ ಒಳಗಾದ ರಾಷ್ಟ್ರೀಯ ಬಾರ್ಡೊ ವಸ್ತು ಸಂಗ್ರಹಾಲಯವನ್ನು ಸುತ್ತುವರಿದಿದ್ದಾರೆ. ವಸ್ತು ಸಂಗ್ರಹಾಲಯದ ಸಮೀಪದ ಲ್ಲಿಯೇ ಇರುವ ಸಂಸತ್‌ ಭವನವನ್ನು ಸಂಪೂರ್ಣ ವಾಗಿ ತೆರವುಗೊಳಿಸಲಾಗಿದೆ.

ಟ್ಯುನಿಷಿಯಾದಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಪದ್ಧತಿಯ ಆಡಳಿತ ವ್ಯವಸ್ಥೆ ಜಾರಿ ಯಲ್ಲಿತ್ತು. 2011ರಲ್ಲಿ ಅದನ್ನು ಕಿತ್ತೊ ಗೆದು ಪ್ರಜಾಪ್ರಭುತ್ವ ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಟ್ಯುನಿಷಿಯಾ ಅತ್ಯಂತ ಶಾಂತಿಯುತವಾಗಿ ಇರುವ ದೇಶವಾಗಿದೆ. ಆದರೆ ಇತ್ತೀಚೆಗೆ ಇಲ್ಲಿ  ಭಯೋತ್ಪಾದಕರ ಉಪಟಳ ಆರಂಭವಾಗಿದೆ. ಈ ದೇಶದ ಮೂರು ಸಾವಿರಕ್ಕೂ ಹೆಚ್ಚು ಮಂದಿ ಐಎಸ್ ಸೇರಿದ್ದಾರೆ.

ಮುಖ್ಯಾಂಶಗಳು
*ಮೃತಪಟ್ಟವರಲ್ಲಿ 17­ ಮಂದಿ ವಿದೇಶಿಯರು
*ದಾಳಿಯಿಂದ ಪ್ರವಾಸೋದ್ಯ ಮಕ್ಕೆ ಭಾರಿ ಹೊಡೆತ
*ಸಂಸತ್ ಸಮೀಪದಲ್ಲೇ ವಸ್ತುಸಂಗ್ರಹಾಲಯ ಇದೆ

Write A Comment