ಅಂತರಾಷ್ಟ್ರೀಯ

ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಉದ್ಯೋಗ ಪರವಾನಿಗೆ ಅಮೆರಿಕದ ನೂತನ ಕ್ರಮ; ಮೇ 26ರಿಂದ ಜಾರಿ

Pinterest LinkedIn Tumblr

h-1b_visa

ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಮೇ 26ರಿಂದ ಅನ್ವಯವಾಗುವಂತೆ ಉದ್ಯೋಗ ಪರವಾನಿಗೆಗಳನ್ನು ನೀಡಲಾಗುವುದು ಎಂದು ಅಮೆರಿಕ ಬುಧವಾರ ಪ್ರಕಟಿಸಿದೆ.

ಅಮೆರಿಕದ ಈ ನೂತನ ಕ್ರಮದಿಂದ ಅಮೆರಿಕಕ್ಕೆ ಬಂದು ಉದ್ಯೋಗ ನಿರ್ವಹಿಸಲು ಸಾಧ್ಯವಾಗದ ಸಾವಿರಾರು ಪ್ರತಿಭಾನ್ವಿತ ಭಾರತೀಯ ಪತಿ-ಪತ್ನಿಯರಿಗೆ ಭಾರೀ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎಚ್-1ಬಿ ವೀಸಾ ಹೊಂದಿರುವವರಲ್ಲಿ ಹೆಚ್ಚಿನವರು ಪತಿ-ಪತ್ನಿಯರೇ ಆಗಿದ್ದು, ಪ್ರಸಕ್ತ ಜಾರಿಯಲ್ಲಿರುವ ಕಾನೂನಿನಂತೆ ಸಂಗಾತಿಗಳಿಬ್ಬರೂ ಉದ್ಯೋಗ ನಿರ್ವಹಿಸಲು ಅರ್ಹರೆಂದು ಪರಿಗಣಿಸಲಾಗುತ್ತಿರಲಿಲ್ಲ. ಅಮೆರಿಕದ ಎಚ್-1ಬಿ ವೀಸಾ ಹೊಂದಿರುವ ದಂಪತಿಗಳಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು, ಭಾರತೀಯರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.

ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ(ಯುಎಸ್‌ಸಿಐಎಸ್)ಯು ಎಚ್-1ಬಿ ವೀಸಾ ಹೊಂದಿರುವ ಸಂಗಾತಿಗಳಿಂದ ಉದ್ಯೋಗ ಪರವಾನಿಗೆಗಳಿಗಾಗಿ ಮೇ 26ರಿಂದ ಅರ್ಜಿಗಳನ್ನು ಸ್ವೀಕರಿಸಲಿದೆ.

ಒಂದು ಬಾರಿ ಯುಎಸ್‌ಸಿಐಎಸ್ ‘ಾರ್ಮ್1-765’ಗೆ ಅಂಗೀಕಾರ ನೀಡಿದಲ್ಲಿ ಮತ್ತು ಎಚ್-4 ಅವಲಂಬಿತ ಸಂಗಾತಿಯು ಉದ್ಯೋಗ ದೃಢೀಕರಣ ಕಾರ್ಡ್ ಪಡೆದಲ್ಲಿ, ಆಕೆ ಅಥವಾ ಆತನು ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಬಹುದಾಗಿದೆ.

ಯುಎಸ್‌ಸಿಐಎಸ್‌ನ ಅಂದಾಜಿನ ಪ್ರಕಾರ, ಹೊಸ ನಿಯಮದಡಿ ಉದ್ಯೋಗ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವ ವ್ಯಕ್ತಿಗಳ ಸಂಖ್ಯೆಯು ಮೊದಲ ವರ್ಷದಲ್ಲಿ 1,79,600ರಷ್ಟಿದ್ದು, ಮುಂದೆ ವಾರ್ಷಿಕ ಸರಾಸರಿ 55 ಸಾವಿರದಷ್ಟಿರಬಹುದು ಎಂದು ತಿಳಿಸಿದೆ.

ಭಾರತೀಯ ಅಮೆರಿಕನ್ನರು ಸರಕಾರದ ನೂತನ ಕ್ರಮವನ್ನು ಸ್ವಾಗತಿಸಿದ್ದಾರೆ.
ಎಚ್-1ಬಿ ವೀಸಾ ವಿಚಾರಗಳಿಗೆ ಸಂಬಂಸಿದಂತೆ ತನ್ನ ಆಡಳಿತವು ಭಾರತದೊಂದಿಗೆ ನಿರಂತರ ಸಂಪರ್ಕದಲ್ಲಿರಲಿದೆ ಎಂದು ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನಿ ಮೋದಿಯವರಿಗೆ ತಿಳಿಸಿದ್ದರು.

ಅಮೆರಿಕದಲ್ಲಿ ಉದ್ಯೋಗಾಧಾರಿತ ಖಾಯಂ ವಾಸ್ತವ್ಯ ಬಯಸುವ ಎಚ್-1ಬಿ ವಲಸೇತರರ ಎಚ್-4 ಅವಲಂಬಿತ ಸಂಗಾತಿಗಳಿಗೆ ಉದ್ಯೋಗ ದೃಢೀಕರಣ ಅರ್ಹತೆಯ ನಿಯಮಗಳನ್ನು ಸಡಿಲಿಸಲಾಗುವುದು ಎಂದು ಹೇಳಿಕೆಯೊಂದರಲ್ಲಿ ಯುಎಸ್‌ಸಿಐಎಸ್ ತಿಳಿಸಿದೆ.
ವಿದೇಶಾಂಗ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2013ರಲ್ಲಿ ಎಚ್-4 ಸ್ವಾನಮಾನ ಪಡೆದಿರುವವರಲ್ಲಿ ಶೇಕಡಾ 76ರಷ್ಟು ಮಂದಿ ದಕ್ಷಿಣ ಏಶ್ಯ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ.

Write A Comment