ಗಲ್ಫ್

ಬಾಹ್ಯಾಕಾಶ ತಂತ್ರಜ್ಞಾನ ಸಹಕಾರ: ಭಾರತ-ಯುಎಇ ಮಾತುಕತೆ

Pinterest LinkedIn Tumblr

uae_india_flag

ದುಬೈ: ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಹಾಗೂ ವೈವಿಧ್ಯಮಯಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಹಾಗೂ ಅದಕ್ಕೆ ಸಂಬಂಸಿದ ಕ್ಷೇತ್ರಗಳಲ್ಲಿ ಸಂಭಾವ್ಯ ಸಹಕಾರದ ಕುರಿತು ಭಾರತ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಚರ್ಚೆ ನಡೆಸಿವೆ.

ಯುಎಇಯ ಎಮಿರೇಟ್ಸ್ ಇನ್‌ಸ್ಟಿಟ್ಯೂಶನ್ ಾರ್ ಅಡ್ವಾನ್ಸ್‌ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ(ಇಐಎಎಸ್‌ಟಿ)ಯ ಮಹಾ ನಿರ್ದೇಶಕ ಯೂಸ್ು ಅಲ್ ಶೈಬಾನಿ ನೇತೃತ್ವದ ಉನ್ನತ ನಿಯೋಗವು ದುಬೈಯಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ಅನುರಾಗ್ ಭೂಷಣ್ ನೇತೃತ್ವದ ನಿಯೋಗದೊಂದಿಗೆ ಚರ್ಚೆ ನಡೆಸಿರುವುದಾಗಿ ಇಐಎಎಸ್‌ಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಾಹ್ಯಾಕಾಶ ಹಾಗೂ ಸಂಬಂತ ಕ್ಷೇತ್ರಗಳಲ್ಲಿ ಯುಎಇಯ ಇಐಎಎಸ್‌ಟಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ನಡುವೆ ಸಂಭಾವ್ಯ ಸಹಕಾರದ ಬಗ್ಗೆ ನಿಯೋಗಗಳು ಚರ್ಚಿಸಿರುವುದಾಗಿ ವರದಿಗಳು ತಿಳಿಸಿವೆ.

ಭಾರತದ ಇಸ್ರೊ ಸುಮಾರು 35ಕ್ಕೂ ಅಕ ರಾಷ್ಟ್ರಗಳೊಂದಿಗೆ ಸಹಕಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ‘‘ಸಮರ್ಪಣಾ ಭಾವ ಹಾಗೂ ನಿರ್ಧಾರದೊಂದಿಗೆ ಸಾಸುವ ಕಾರ್ಯಗಳಿಗೆ ಯಾವುದೇ ಸೀಮಾರೇಖೆಯಿಲ್ಲ ಎಂದು ಭಾರತ ತೋರಿಸಿಕೊಟ್ಟಿದೆ. ಇಐಎಎಸ್‌ಟಿ, ಇಸ್ರೊ ಹಾಗೂ ಇತರ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸುವ ತಮ್ಮ ರಾಷ್ಟ್ರೀಯ ಗುರಿಯ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳುವುದು ನಮ್ಮ ಧ್ಯೇಯಗಳಲ್ಲಿ ಒಂದಾಗಿದೆ. ಇಸ್ರೊದೊಂದಿಗೆ ಭವಿಷ್ಯದ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ನಾವು ಎದುರುನೋಡುತ್ತಿದ್ದೇವೆ’’ ಎಂದು ಇಐಎಎಸ್‌ಟಿಯ ಮಹಾ ನಿರ್ದೇಶಕ ಅಲ್ ಶೈಬಾನಿ ಹೇಳಿದ್ದಾರೆ.

Write A Comment