ಅಂತರಾಷ್ಟ್ರೀಯ

ಗೋಲ್ಡ್ ಫಿಶ್ ಸರ್ಜರಿಗೆ 300 ಪೌಂಡ್ ಖರ್ಚು!

Pinterest LinkedIn Tumblr

goldfish

ಕ್ಯಾಲಿಫೋರ್ನಿಯ: ಸಾಯುವ ಹಂತಕ್ಕೆ ಬಂದಿದ್ದ ಗೋಲ್ಡ್ ಫಿಶ್ ಸರ್ಜರಿಯಿಂದ ಬದುಕುಳಿದಿರುವ ಘಟನೆ ಕ್ಯಾಲಿಫೋರ್ನಿಯಾದ ನಾರ್ತ್ ವಾಲ್‍ಶಾಮ್‍ನಲ್ಲಿ ನಡೆದಿದೆ. ಮೀನಿನ ಮಾಲೀಕ ತಾನು ಇಷ್ಟಪಟ್ಟು ಸಾಕಿದ ಗೋಲ್ಡ್ ಫಿಶ್ ಯಾವುದೇ ಆಹಾರ ತಿನ್ನದೇ ಸಾಯುವ ಸ್ಥಿತಿಗೆ ಬಂದಿದ್ದಾಗ ಅದಕ್ಕೆ ಸರ್ಜರಿ ಮಾಡಿಸಿ ಮೀನನ್ನು ಉಳಿಸಿಕೊಂಡಿದ್ದಾನೆ.

ಟೋಲ್ ಬಾರ್ನ್ ಪಶುಚಿಕಿತ್ಸಾ ಕೇಂದ್ರಕ್ಕೆ ಗೋಲ್ಡ್‍ಫಿಶ್ ತಂದಾಗ ಮೀನಿನ ಸರ್ಜರಿಗೆ 300(ಅಂದಾಜು 28 ಸಾವಿರ) ಪೌಂಡ್ ಆಗುತ್ತದೆ ಎಂದು ಡಾ. ವೆಟ್ ಫಾಯೆ ಬೆಥೆಲ್ ಹೇಳಿದಾಗ ಮೊದಲು ನಿರಾಕರಿಸಿದ್ದ ಮೀನಿನ ಮಾಲೀಕ ನಂತರ ಸರ್ಜರಿಗೆ ಒಪ್ಪಿಕೊಂಡಿದ್ದಾನೆ.

ಗುದದ ಸಮಸ್ಯೆ ಹೊಂದಿದ್ದ ಮೀನಿಗೆ ಯಾವುದೇ ಘನ ವಸ್ತುಗಳನ್ನು ದೇಹದಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಣ್ಣದೊಂದು ಸರ್ಜರಿ ಮಾಡಿದ ನಂತರ ಗೋಲ್ಡ್‍ಫಿಶ್ ನೆಮ್ಮದಿಯಿಂದ ನೀರಿನಲ್ಲಿ ಈಜಲು ಆರಂಭ ಮಾಡಿದೆ.

ಡಾ. ವೆಟ್ ಮೀನಿಗೆ ಅನಸ್ಥೇಶಿಯಾ ನೀಡಿ ಗುದದಲ್ಲಿ ಇದ್ದಂತಹ ಗಂಟನ್ನು ತೆಗೆದುಹಾಕಿದರು. ನಂತರ ಬೆನ್ನಿನ ಚಿಕ್ಕ ರೆಕ್ಕೆಯನ್ನು ತೆಗೆದುಹಾಕಿದ ನಂತರ ಮೀನು ಸ್ವಾತಂತ್ರ್ಯವಾಗಿ ಈಜಲು ಆರಂಭಿಸಿದಾಗ ಅದನ್ನು ಅದರ ಗ್ರೇಟ್‍ಫುಲ್ ಮಾಲೀಕನಿಗೆ ಒಪ್ಪಿಸಿದರು.

ಸರ್ಜರಿಯನ್ನು 50 ನಿಮಿಷಗಳಲ್ಲಿ ಮಾಡಲಾಯಿತು, ಒಂದು ವೇಳೆ ಈ ಸರ್ಜರಿಯನ್ನು ಮಾಡದಿದ್ದರೆ, ಮೀನು ಬದುಕುತ್ತಿರಲಿಲ್ಲ. ನಾನು ಮೊದಲ ಬಾರಿಗೆ ಶಸ್ತ್ರಕ್ರಿಯೆ ಮಾಡಿದ್ದು, ಯಶಸ್ವಿಯಾಗಿದೆ ಎಂದು ಡಾ.ವೆಟ್ ಹೇಳಿದ್ದಾರೆ.

ಸಾಮಾನ್ಯವಾಗಿ ಗೋಲ್ಡ್ ಫಿಶ್‍ಗಳು 10 ವರ್ಷ ಬದುಕುತ್ತವೆ. ಈ ಮೀನಿಗೆ ಸರ್ಜರಿ ನಡೆದಾಗ 2 ವರ್ಷ 10 ತಿಂಗಳು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ 300 ಪೌಂಡ್ ಖರ್ಚುಮಾಡಿ ಗೋಲ್ಡ್‍ಫಿಶ್ ಮಾಲೀಕ ತನ್ನ ಪ್ರೀತಿಯ ಗೋಲ್ಡ್‍ಫಿಶನ್ನು ಉಳಿಸಿಕೊಂಡಿದ್ದಾನೆ.

Write A Comment