ಮನೋರಂಜನೆ

ಕೈಕೊಟ್ಟ ‘ಲಿಂಗಾ’ : ರಜನಿ ಮನೆ ಮುಂದೆ ವಿತರಕರು ಧರಣಿ

Pinterest LinkedIn Tumblr

rajanikanth11

ಚೆನ್ನೈ, ಜ.5: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಲಿಂಗಾ ಚಲನಚಿತ್ರ ಬಿಡುಗಡೆಯಾಗಿ 25 ದಿನ ಕಳೆದರೂ ಚಿತ್ರದ ವಿತರಕರು ನೀಡಿದ್ದ ಹಣದಲ್ಲಿ ಶೇ.30ರಷ್ಟು ವಾಪಸ್ ಕೊಡಲು ಸಾಧ್ಯವಾಗದ ಕಾರಣ ರಜನಿಕಾಂತ್ ಮನೆ ಮುಂದೆ ಧರಣಿ ನಡೆಸಲಿದ್ದೇವೆ ಎಂದು ತಿರುಚಿ ಮೂಲದ ಚಿತ್ರ ವಿತರಕ ಸಿಂಗರವೇಲನ್ ತಿಳಿಸಿದ್ದಾರೆ.

ಲಿಂಗಾ ಚಲನಚಿತ್ರ ಹೆಚ್ಚಿನ ಹಣ ಗಳಿಸಬಹುದೆಂಬ ನಿರೀಕ್ಷೆಯಿಟ್ಟುಕೊಂಡು ಹಣ ಹೂಡಿದ್ದೆವು. ಆದರೆ ನಿರೀಕ್ಷೆಯಂತೆ ಹಣ ಗಳಿಸಲಿಲ್ಲ. ರಜನಿ ಅವರು ಹಣ ಹಿಂದಿರುಗಿಸಲು ನಿರಾಕರಿಸಿದರೆ ಅವರ ಮುಂದಿನ ಸಿನಿಮಾಗಳನ್ನ ಬಹಿಷ್ಕರಿಸದೆ ನಮಗೆ ವಿಧಿಯಿಲ್ಲ, ಕೊನೆಯ ಪಕ್ಷ ರಜನಿ ಅವರು ಚಿತ್ರಮಂದಿರ ಮಾಲೀಕರ ಜೊತೆ ಮಾತುಕತೆ ನಡೆಸಬೇಕೆಂದು ತಿಳಿಸಿದ್ದಾರೆ.

ಧರಣಿ ನಡೆಸಲು ನಗರ ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿರುವುದರಿಂದ ಚಿತ್ರಮಂದಿರ ಮಾಲೀಕರು ಹಾಗೂ ವಿತರಕರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು 45 ಕೋಟಿ ಬಜೆಟ್‌ನಲ್ಲಿ ಸಿನಿಮಾವೊಂದನ್ನು ಮಾಡಿದ್ದರು. ಏರೋಸ್ ಅವರಿಂದ ಅದನ್ನು ಕೊಂಡು 200ಕೋಟಿ ಗಳಿಸಿತ್ತು. ಸಿನಿಮಾವನ್ನು ನಮಗೆ ಮಾರಿದ ವೆಂದಾರ್ ಮೂವೀಸ್ ಕೂಡ ಭಾಗಶಃ ಲಾಭಗಳಿಸಿತು. ಆದರೆ ನಾವು ಮಾತ್ರ ನಷ್ಟ ಅನುಭವಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಕೆ.ಎಸ್.ರವಿಕುಮಾರ್ ಅಥವಾ ಏರೋಸ್ ನೋಡಿ ಯಾರೂ ಸಿನಿಮಾ ಕೊಳ್ಳಲಿಲ್ಲ. ನಿರ್ಮಾಪಕ ನನ್ನನಂಥೂ ಬಿಟ್ಟುಬಿಡಿ ಎಂದು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ವಿಕ್ರಮ್ ಅಭಿನಯದ ಮಜಾ ಸಿನಿಮಾ ನೆಲಕಚ್ಚಿದ್ದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.

Write A Comment