ಅಂತರಾಷ್ಟ್ರೀಯ

ಬ್ಯಾಂಕ್‌ನಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟ : 10ಕ್ಕೂ ಹೆಚ್ಚು ಸಾವು

Pinterest LinkedIn Tumblr

Bank-Blast

ಹೆಲ್ಮಂಡ್(ಆಫ್ಘಾನಿಸ್ತಾನ),ಡಿ.17: ಆತ್ಮಾಹುತಿ ದಾಳಿ ಬಾಂಬರ್‌ವೊಬ್ಬ ಇಲ್ಲಿನ ಬ್ಯಾಂಕ್‌ವೊಂದಕ್ಕೆ ನುಗ್ಗಿ ತನ್ನನ್ನು ತಾನು ಸ್ಫೋಟಿಸಿ ಕೊಂಡಿದ್ದು, 10ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ಬ್ಯಾಂಕ್‌ನಲ್ಲಿ ವ್ಯವಹಾರ ನಡೆಯುತ್ತಿದ್ದ ಸಂದರ್ಭ ಏಕಾಏಕಿ ತಾಲಿಬಾನು ಉಗ್ರರು ಒಳಗೆ ನುಗ್ಗಿದರು. ಒಬ್ಬ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಪೋಟಿಸಿಕೊಂಡ. ಈ ಸ್ಫೋಟಕ್ಕೆ ಗ್ರಾಹಕರು ಮತ್ತು ಸಿಬ್ಬಂದಿ ಸೇರಿದಂತೆ 10 ಮಂದಿ ಬಲಿಯಾದರೆಂದು ವರದಿಯಾಗಿದೆ.

ಆತ್ಮಾಹುತಿ ಬಾಂಬರ್ ಜೊತೆಯಲ್ಲೇ ಒಳಗೆ ನುಗ್ಗಿರುವ ಇತರ ನಾಲ್ವರು ಉಗ್ರರು ಬ್ಯಾಂಕ್‌ನಲ್ಲಿದ್ದ ಹಲವು ಗ್ರಾಹಕರು ಮತ್ತು ಸಿಬ್ಬಂದಿಯನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮತ್ತು ಸೇನಾಪಡೆ ಯೋಧರು ಭಯೋತ್ಪಾದಕರನ್ನು ಮಟ್ಟ ಹಾಕಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಬ್ಯಾಂಕ್‌ನಲ್ಲಿ ಎಷ್ಟು ಜನ ಉಗ್ರರಿದ್ದಾರೆ ಮತ್ತು ಒತ್ತೆಯಾಳುಗಳಿದ್ದಾರೆ ಎಂಬುದು ಖಚಿತವಾಗಿ ತಿಳಿದಿಲ್ಲ.

ಬ್ಯಾಂಕ್ ಆವರಣದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ನಿನ್ನೆ ಪಾಕಿಸ್ತಾನದ ಪೇಶಾವರ ಮತ್ತು ಯಮನ್‌ನಲ್ಲಿ ನಡೆದ ಭಯೋತ್ಪಾದಕರ ಹಿಂಸಾಕೃತ್ಯಗಳ ಬೆನ್ನಲ್ಲೆ ಇಂದು ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿರುವುದು ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

Write A Comment