ಕನ್ನಡ ವಾರ್ತೆಗಳು

ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ : ಎಚ್‌.ಎಸ್‌. ವರದರಾಜನ್‌

Pinterest LinkedIn Tumblr

 home_guards_photo_4

ಮಂಗಳೂರು,ಡಿ.17: ಮೇರಿಹಿಲ್‌ನಲ್ಲಿ ಮಂಗಳವಾರ ನಡೆದ ಗೃಹ ರಕ್ಷಕ ದಳ ದಿನಾಚರಣೆಯಲ್ಲಿ ಅಗ್ನಿಶಾಮಕದಳದ ಅಧಿಕಾರಿ ಎಚ್‌.ಎಸ್‌. ವರದರಾಜನ್‌ ಅವರು ಭಾಗವಹಿಸಿ ಜನರ ಸೇವೆಯೇ ನಮ್ಮ ಮುಖ್ಯ ಕರ್ತ್ಯವ್ಯ ಎಂಬ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕ ದಳ ಹಾಗೂ ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಗೃಹರಕ್ಷಕ ದಳದ ಕಾರ್ಯ ಶ್ಲಾಘನೀಯ ಎಂದರು.

home_guards_photo_1home_guards_photo_2 home_guards_photo_3 home_guards_photo_5 home_guards_photo_6

ಮಂಗಳೂರು ನಗರದ ನಿವೃತ್ತ ಕಮಾಂಡೆಂಟ್‌ ವಿಜಯ್‌ ಕುಮಾರ್‌ ಮತ್ತು ಅದ್ಭುತ ಸೇವೆಗೆ “ಮುಖ್ಯಮಂತ್ರಿ ಚಿನ್ನದ ಪದಕ” ಪಡೆದ ಎಚ್‌. ನಾರಾಯಣ ಅವರನ್ನು ಸಮ್ಮಾನಿಸಲಾಯಿತು. ಪಾಂಡ್ಯರಾಜ್‌ ವರದಿ ವಾಚಿಸಿದರು. ವಾರ್ಷಿಕ ವರದಿಯನ್ನು ಜಯರಾಜ್‌ ಮಂಡಿಸಿದರು. ಡೆಪ್ಯೂಟಿ ಕಮಾಂಡೆಂಟ್‌ ಪುರುಷೋತ್ತಮ್‌ ಹಾಗೂ ಮುಹಮ್ಮದ್‌ ಇಸ್ಮಾಯಿಲ್‌, ಉಷಾ, ಕಾರ್ಪೊರೇಷನ್‌ ಬ್ಯಾಂಕ್‌ನ ದೇವಿಕಾ ರೈ, ಜಯಂತ್‌ ಶೆಟ್ಟಿ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment