ಅಂತರಾಷ್ಟ್ರೀಯ

ಅತ್ಯಾಚಾರಿಗಳ ಸಾಮ್ರಾಜ್ಯ; ಇದು ಕಾಂಗೋ ಗಣರಾಜ್ಯ

Pinterest LinkedIn Tumblr

congo_women

ಈ ದೇಶ ಮಹಿಳೆಯರ ಪಾಲಿಗೆ ನರಕ! ಇದು ಅತ್ಯಾಚಾರಿಗಳ ಸಾಮ್ರಾಜ್ಯವಾಗಿರುವ ಈ ದೇಶದಲ್ಲಿ ಮಹಿಳೆಯರು ತಮ್ಮ ಮಾನ ರಕ್ಷಿಸಿ ಬದುಕುವುದು ತುಂಬಾನೇ ಕಷ್ಟ.

ಆಫ್ರಿಕನ್ ದೇಶವಾದ ಕಾಂಗೋ ಗಣರಾಜ್ಯದಲ್ಲಿ ಗಂಟೆಗೆ 48 ಮಹಿಳೆಯರು ಅತ್ಯಾಚಾರಕ್ಕೀಡಾಗುತ್ತಾರೆ ಎಂಬುದನ್ನು ನೀವು ನಂಬಲೇ ಬೇಕು. ಬಡತನ ಪೀಡಿತ ದೇಶವಾಗಿದ್ದರಿಂದ ಇಲ್ಲಿ ಯಾವುದೇ ಅಭಿವೃದ್ಧಿಗಳು ನಡೆಯುವುದಿಲ್ಲ. ಹೀಗಿರುವಾಗ ಇಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

ಮಹಿಳೆಯರ ಮೇಲೆ ಇಷ್ಟೊಂದು ಅತ್ಯಾಚಾರಗಳಾಗುತ್ತಿದ್ದರೂ ಯಾರೂ ಸೊಲ್ಲೆತ್ತುವುದಿಲ್ಲ. ಇಲ್ಲಿ ಅತ್ಯಾಚಾರಿಗಳು ರಾಜಾರೋಷವಾಗಿ ನಡೆದಾಡುತ್ತಾರೆ. ಅವರ ವಿರುದ್ಧ ಯಾರೂ ಮೊಕದ್ದಮೆ ದಾಖಲಿಸುವುದೂ ಇಲ್ಲ. ಒಂದು ವೇಳೆ ದೂರು ನೀಡಿದರೂ ಆಡಳಿತ ವರ್ಗ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ವಿಚಿತ್ರ ಎಂದೆನಿಸಿದರೂ ಇದು ಸತ್ಯ!

ಭೂಮಿಯಲ್ಲಿ ಮಹಿಳೆಯರು ವಾಸಿಸಲು ಕಷ್ಟವಾಗಿರುವ ಸ್ಥಳವೆಂದರೆ ಅದು ಕಾಂಗೋ ಗಣರಾಜ್ಯ ಎನ್ನುತ್ತಿವೆ ವರದಿಗಳು. ತಮ್ಮ ಮೇಲೆ ಅತ್ಯಾಚಾರ ನಡೆದರೂ ಇಲ್ಲಿ ಮಹಿಳೆಯರು ಪ್ರತಿಭಟಿಸುವುದೇ ಇಲ್ವಂತೆ.

ಈ ದೇಶದಲ್ಲಿ 67 ಮಿಲಿಯನ್ ಜನರು ವಾಸಿಸುತ್ತಿದ್ದು, ಇದಲ್ಲಿ ಶೇ.87ರಷ್ಟು ಜನರ ದಿನದ ಆದಾಯ 1.45 ಡಾಲರ್ ಗಿಂತಲೂ ಕಡಿಮೆಯಿದೆ.

ಹೆಣ್ಮಕ್ಕಳು ಋತುಮತಿಯರಾಗುವ ಮುನ್ನವೇ ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಇಲ್ಲಿ ಸೈನಿಕರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರವೆಸಗುತ್ತಾರೆ. ಆದರೆ ಯಾರೂ ಈ ಬಗ್ಗೆ ಮೌನ ಮುರಿಯುವುದಿಲ್ಲ. ಅತ್ಯಾಚಾರಕ್ಕೊಳಗಾದವರು ನರಕ ಯಾತನೆ ಅನುಭವಿಸುತ್ತಿದ್ದರೆ ಸಮಾಜ ಅವರತ್ತ ದೃಷ್ಟಿ ಹಾಯಿಸುವುದೂ ಇಲ್ಲ.

ಇಲ್ಲಿನ ನಿಜಸ್ಥಿತಿಯ ಬಗ್ಗೆ ಆಸ್ಟ್ರೇಲಿಯಾದ ಸಂಘಟನೆಯೊಂದು ಬಹಿರಂಗ ಪಡಿಸಿದ್ದು, ಅತ್ಯಾಚಾರಕ್ಕೊಳಗಾದ ಮಹಿಳೆಯರ ಸಹಾಯಕ್ಕೆ ಮುಂದಾಗಿತ್ತು.  ಆದರೆ ಅತ್ಯಾಚಾರದ ವಿರುದ್ಧ ದೂರು ನೀಡಿದ ಮಹಿಳೆಯರಿಗೆ ಬೆದರಿಕೆ ನೀಡಿ, ಅವರನ್ನು ಅಲ್ಲಿಂದ ಓಡಿಸುವ ಪ್ರಯತ್ನವೂ ನಡೆದಿತ್ತು.

Write A Comment