ಕರ್ನಾಟಕ

ಮದುವೆ ದೃಢೀಕರಣ ಕೋರಿದ ಮೈತ್ರಿಯಾ ಗೌಡ ಅರ್ಜಿ ವಜಾ

Pinterest LinkedIn Tumblr

Mythriya_Gowda

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರೊಂದಿಗೆ ಮದುವೆ ದೃಢೀಕರಿಸಬೇಕೆಂದು ನಟಿ ಮೈತ್ರಿಯಾ ಗೌಡ ಸಲ್ಲಿಸಿದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ.

ಕಾರ್ತಿಕ್ ಗೌಡ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರವೇ ನಮ್ಮಿಬ್ಬರ ಮದುವೆಯಾಗಿರುವ ಕಾರಣ, ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಳ್ಳಬೇಕು. ಮಾತ್ರವಲ್ಲದೆ ಪತ್ನಿಗೆ ಸೇರುವ ಎಲ್ಲ ಹಕ್ಕುಗಳನ್ನು ನನಗೆ ನೀಡತಕ್ಕದು. ಅವರು ಬೇರೊಂದು ಹೆಣ್ಣನ್ನು ಮದುವೆಯಾಗುವುದಕ್ಕೆ ತಡೆಯೊಡ್ಡಬೇಕು. ಅವರೀಗ ಯಾವುದೇ ಯುವತಿಯ ಜತೆ ಮದುವೆಯಾದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಮೈತ್ರಿಯಾ ಅರ್ಜಿ ಸಲ್ಲಿಸಿದ್ದರು.

ಆದರೆ ಕಾರ್ತಿಕ್ ಗೌಡ ಮತ್ತು ಮೈತ್ರಿಯಾ ಮದುವೆಯಾಗಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಸಿಕಿಲ್ಲ. ಇದಕ್ಕೆ ಫೋಟೋ ಪುರಾವೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ವಿವಾಹವಾಗಿದ್ದೇವೆ ಎಂದಾದರೆ ತಾಳಿ ಕಟ್ಟಿರುವ, ಸಪ್ತಪದಿ ತುಳಿದಿರುವ ಚಿತ್ರಗಳು ಬೇಕು. ಆದಾಗ್ಯೂ, ವಿವಾಹ ನೋಂದಣಿ ಮಾಡಿ ಪ್ರಮಾಣಪತ್ರವನ್ನು ಮೈತ್ರಿಯಾ ನೀಡಿಲ್ಲ ಎಂಬ ಕಾರಣವನ್ನು ನೀಡಿ ಕೋರ್ಟ್ ಮದುವೆಯನ್ನು ಅನೂರ್ಜಿತಗೊಳಿಸಿದೆ.

ಕಾರ್ತಿಕ್ ಗೌಡ ಬೇರೆ ಮದುವೆಯಾಗಬಾರದು ಎಂದು ಮೈತ್ರಿಯಾ ಸಲ್ಲಿಸಿದ ಅರ್ಜಿ ತಿರಸ್ಕತಗೊಂಡಿರುವುದರಿಂದ ಡೀವಿ ಕುಟುಂಬ ನಿರಾಳವಾಗಿದ್ದು, ಕಾರ್ತಿಕ್‌ಗೆ ನಿಶ್ಚಯವಾಗಿರುವ ಮದುವೆಗೆ ಇನ್ನು ಸಿದ್ಧತೆ ನಡೆಸಬಹುದಾಗಿದೆ.

Write A Comment