ಅಂತರಾಷ್ಟ್ರೀಯ

‘ಭಯೋತ್ಪಾದನಾ ನಿಗ್ರಹವೇ ನಮ್ಮ ಗುರಿ’: ಭಾರತ ಪ್ರಧಾನಿ ಮೋದಿ ಮತ್ತು ಆಸಿಸ್ ಪ್ರಧಾನಿ ಕೆಮರೂನ್ ಜಂಟಿ ಅಭಿಪ್ರಾಯ

Pinterest LinkedIn Tumblr

cameron-and-modi

ಸಿಡ್ನಿ: ಭಯೋತ್ಪಾದನೆ ನಿಗ್ರಹವೇ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಪ್ರಮುಖ ಗುರಿ ಎಂದು ಭಾರತ ಪ್ರಧಾನಿ ಮೋದಿ ಮತ್ತು ಆಸಿಸ್ ಪ್ರಧಾನಿ ಕೆಮರೂನ್ ಜಂಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾ ಪ್ರಧಾನಿ ಡೇವಿಡ್ ಕೆಮರೂನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬ್ರಿಸ್‌ಬೇನ್‌ನಲ್ಲಿ ಸುಮಾರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆದರದಿಂದ ಬರಮಾಡಿಕೊಂಡ ಕೆಮರೂನ್ ಅವರು, ನರೇಂದ್ರ ಮೋದಿ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದು, ನಾಳೆಯಿಂದ ಆರಂಭವಾಗಲಿರುವ ಜಿ-210 ಶೃಂಗಸಭೆಯಲ್ಲಿ ಅವರು ಪಾಲ್ಗೊಳ್ಳಲ್ಲಿದ್ದಾರೆ.

ಇದಕ್ಕೂ ಮೊದಲು ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲಹೊತ್ತು ಮಕ್ಕಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ಅವರ ಜನ್ಮದಿನಾಚರಣೆಯನ್ನು ಮಕ್ಕಳೊಂದಿಗೆ ಸೇರಿ ಆಚರಿಸಿಕೊಂಡರು.

ಭಾರತದ ನಕ್ಷೆಯಿಂದ ಕಾಶ್ಮೀರವನ್ನು ಬೇರ್ಪಡಿಸಿ ಕ್ಷಮೆ ಯಾಚಿಸಿದ QUT

ಇದೇ ವೇಳೆ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಿಂದ ಪ್ರಮಾದವೊಂದು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವವಿದ್ಯಾಲಯದ ಭೇಟಿ ವೇಳೆ ಪ್ರದರ್ಶಿಸಲಾಗಿದ್ದ ಭಾರತದ ನಕ್ಷೆಯಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲಾಗಿತ್ತು. ಈ ವಿಚಾರ ತಿಳಿಯುತ್ತಲೇ ಭಾರತ ತನ್ನ ಆಕ್ರೋಶ ವ್ಯಕ್ತಪಡಿಸಿತು. ತಾನು ಮಾಡಿದ ಪ್ರಮಾದವನ್ನು ಕೂಡಲೇ ಅರಿತುಕೊಂಡ  Queensland University of Technology (QUT)ದ ಆಡಳಿತ ಮಂಡಳಿ ಭಾರತದ ಕ್ಷಮೆ ಯಾಚಿಸಿದೆ.

ಜಪಾನ್ ಪ್ರಧಾನಿಯೊಂದಿಗೆ ಔತಣಕೂಟ

ಸಂಜೆ ಸುಮಾರು 3.35ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿದ್ದರು. ಔತಣಕೂಟದ ವೇಳೆ ಎರಡೂ ದೇಶಗಳ ಪ್ರಧಾನಿಗಳು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

Write A Comment