ಅಂತರಾಷ್ಟ್ರೀಯ

ದೌರ್ಜನ್ಯ ತಡೆಯುವಂತೆ ಶರೀಫ್ ಅವರಿಗೆ ಪಾಕಿಸ್ತಾನಿ ಹಿಂದೂಗಳ ಆಗ್ರಹ

Pinterest LinkedIn Tumblr

Pak_Hindus_PTI

ಇಸ್ಲಾಮಾಬಾದ್: ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಒಂದು ಸಕ್ರಿಯ ಸಮಿತಿ ರಚಿಸುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರಿಗೆ ಪಾಕಿಸ್ತಾನಿ ಹಿಂದೂ ಸಮಾಜ ಬೇಡಿಕೆಯಿಟ್ಟಿದೆ.

ಪಂಜಾಬ್ ಪ್ರಾಂತ್ಯದಲ್ಲಿ ಕ್ರಿಶ್ಚಿಯನ್ ದಂಪತಿಗಳನ್ನು ಬರ್ಬರವಾಗಿ ಕೊಲೆಮಾಡಿದ ಘಟನೆಯನ್ನು ಮತ್ತು ಹಿಂದೂ ನಾಗರಿಕರನ್ನು ಅದರಲ್ಲೂ ಅಪ್ರಾಪ್ತ ಬಾಲಕಿಯರ ಅಪಹರಣ ಕೃತ್ಯಗಳನ್ನು ಹಿಂದೂ ಸಮಾಜ ಖಂಡಿಸಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಪಸಂಖ್ಯಾತರನ್ನು ರಕ್ಷಿಸಲು ಪರಿಣಾಮಕಾರಿ ಕಾನೂನುಗಳನ್ನು ಜಾರಿಗೆ ತರುವಂತೆ ಪ್ರಧಾನಮಂತ್ರಿ ಮತ್ತು ಪ್ರಾಂತ್ಯಗಳ ಮುಖ್ಯಮಂತ್ರಿಗಳನ್ನು ಆಗ್ರಹಿಸಿರುವ ಸಮಿತಿ, ಹಿಂದೂ ವಿವಾಹ ಕಾನೂನು ಮತ್ತು ಅಂತರ್ಧರ್ಮಗಳ ಸೌಹಾರ್ದತೆ ಅವಶ್ಯಕ ಎಂದಿದ್ದಾರೆ.

ಅಲ್ಪಸಂಖ್ಯಾತರು ಸುಲಭವಾಗಿ ಆಕ್ರಮಣಕ್ಕೊಳಗಾಗುತ್ತಾರೆ, ಅಲ್ಲದೆ ಭೂಮಾಫಿಯಾ ಅಲ್ಪಸಂಖ್ಯಾತರ ಧಾರ್ಮಿಕ ಪ್ರದೇಶಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದಲ್ಲಿ ಸಕ್ರಿಯವಾಗಿದೆ” ಎಂದು ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಮುಗ್ಧ ಹಿಂದೂ ಬಾಲಕಿಯರ ಅಪಹರಣ, ಒತ್ತಾಯದ ಮತಾಂತರಗಳು ಮತ್ತು ಮದುವೆಗಳು ಹಿಂದೂಗಳ ಮೇಲೆ ನಡೆಯುತ್ತಿರುವ ಸರ್ವೇ ಸಾಮಾನ್ಯ ದೌರ್ಜನ್ಯಗಳಾಗಿವೆ. ಹಿಂದೂ ವಿವಾಹ ಕಾನೂನು ಜಾರಿಯಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ” ಎನ್ನುತ್ತಾರೆ.

ಕ್ರಿಶ್ಚಿಯನ್ ದಂಪತಿಗಳನ್ನು ಜೀವಂತವಾಗಿ ಸುಟ್ಟ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತ, ಈ ಘಟನೆ ಅಲ್ಪಸಂಖ್ಯಾತರಲ್ಲಿ ಭಯಭೀತಿಯನ್ನು ಹುಟ್ಟಿಸಿದೆ ಮತ್ತು “ಸದ್ಯ ಜಾರಿಯಲ್ಲಿರುವ ಸರ್ಕಾರದ ಬಗ್ಗೆ ಅಲ್ಪಸಂಖ್ಯಾತರು ನಂಬಿಕೆ ಕಳೆದುಕೊಂಡಿದ್ದಾರೆ” ಎಂದಿದ್ದಾರೆ.

ಸರ್ಕಾರಿ ದಾಖಲೆಗಳ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು ೧೦ ಲಕ್ಷ ಹಿಂದೂಗಳು ೨೦ ಲಕ್ಷ ಕ್ರಿಶ್ಚಿಯನ್ನರು ಮತ್ತು ೨೦ ಸಾವಿರ ಸಿಕ್ ಧರ್ಮದ ಪ್ರಜೆಗಳು ವಾಸವಾಗಿದ್ದಾರೆ.

Write A Comment