ಅಂತರಾಷ್ಟ್ರೀಯ

ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ ಭಾರತೀಯ ಬಾಲಕಿ ನಾಮಕರಣ

Pinterest LinkedIn Tumblr

neha-gupta-pink-NRI

ದ ಹೇಗ್, ಸೆ.26: ‘ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ-2014’ಕ್ಕೆ ನಾಮನಿರ್ದೇಶನಗೊಂಡಿರುವ ಮೂವರು ಮಕ್ಕಳಲ್ಲಿ ಭಾರತೀಯ ಮೂಲದ ಅಮೆರಿಕನ್ ಬಾಲಕಿ ನೇಹಾ ಗುಪ್ತಾ ಒಳಗೊಂಡಿರುವುದಾಗಿ ವರದಿಯೊಂದು ತಿಳಿಸಿದೆ.

ಆ್ಯಮ್‌ಸ್ಟರ್‌ಡ್ಯಾಮ್ ಮೂಲದ ಮಕ್ಕಳ ಹಕ್ಕು ಸಂಘಟನೆ ‘ಕಿಡ್ಸ್ ರೈಟ್ಸ್’ ಈ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು ನೀಡುತ್ತಿದೆ.

ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವವರಲ್ಲಿ ಭಾರತೀಯ ಮೂಲದ ಅಮೆರಿಕನ್ ಬಾಲಕಿ ನೇಹಾ ಗುಪ್ತಾ, ರಶ್ಯದ ಅಲೆಕ್ಸಿ ಹಾಗೂ ಘಾನಾದ ಆ್ಯಂಡ್ರೂ ಸೇರಿದ್ದಾರೆ.

ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕ ಸುಧಾರಣೆಯಲ್ಲಿ ಪ್ರಭಾವಿ ಯತ್ನಗಳನ್ನು ನಡೆಸಿರುವ ಮಗುವೊಂದಕ್ಕೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ತನ್ನ ಸ್ವಂತ ಪ್ರತಿಷ್ಠಾನವೊಂದರ ಮೂಲಕ ಕಷ್ಟದಲ್ಲಿರುವ ಮಕ್ಕಳಿಗೆ ನೆರವು ನೀಡು ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ಪರಿಗಣಿಸಿ ನೇಹಾ(18)ಳಿಗೆ ಈ ಪ್ರಶಸ್ತಿ ಘೋಸಿಸಲಾಗಿದೆ.

ಅಲೆಕ್ಸಿ(17), ರಶ್ಯದಲ್ಲಿ ಸಲಿಂಗಕಾಮಿಗಳು ಹಾಗೂ ತೃತೀಯಲಿಂಗಿ ಯುವಜನರ ದೌರ್ಜನ್ಯದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕಾಗಿ ನಾಮನಿರ್ದೇಶನಗೊಂಡಿದ್ದು, ರಾಷ್ಟ್ರದಲ್ಲಿನ ಕ್ಷಾಮದ ವಿರುದ್ಧದ ಹೋರಾಟದ ಭಾಗವಾಗಿ ಆಹಾರ ನೆರವು ಯೋಜನೆ ಮ್ಮಿಕೊಂಡಿರುವುದನ್ನು ಪರಿಗಣಿಸಿ ಆ್ಯಂಡ್ರೂ(13) ಹೆಸರು ಸೂಚಿಸಲಾಗಿದೆ. ಈ ಪ್ರಶಸ್ತಿಯನ್ನು 2005ರಿಂದಲೂ ಕೊಡಮಾಡಲಾಗುತ್ತಿದ್ದು, ಇದು ಹತ್ತನೆಯ ಆವೃತ್ತಿಯಾಗಿದೆ.

2014ನೆ ಸಾಲಿನ ವಿಜೇತರನ್ನು ನವೆಂಬರ್ 18ರಂದು ದ ಹೇಗ್‌ನಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಘೋಷಿಸಲಾಗುತ್ತದೆ. 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ದಕ್ಷಿಣ ಆಫ್ರಿಕದ ಮಾಜಿ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಪ್ರಶಸ್ತಿ ವಿತರಿಸಲಿದ್ದಾರೆ.

Write A Comment