ರಾಷ್ಟ್ರೀಯ

ಕೊರೊನಾ ಲಸಿಕೆ ಪಡೆದವರೆಲ್ಲರೂ ಬಾಹುಬಲಿಗಳು: ಪ್ರಧಾನ ಮಂತ್ರಿ ಮೋದಿ

Pinterest LinkedIn Tumblr

ನವದೆಹಲಿ: ಮಾನ್ಸೂನ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಸಂಪ್ರದಾಯದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಧ್ಯಮಗಳನ್ನು ಸಂಭೋದಿಸಿ ಮಾತನಾಡಿದರು. ಈ ವೇಳೆ ಕೊರೊನಾ ಲಸಿಕೆ ಪಡೆದವರೆಲ್ಲರೂ ಬಾಹುಬಲಿಗಳು ಎಂದು ಹೇಳಿದರು.

ಅಧಿವೇಶನದಲ್ಲಿ ವಿಪಕ್ಷದ ನಾಯಕರು ಕಷ್ಟದ ಪ್ರಶ್ನೆಗಳನ್ನು ಕೇಳಲಿ. ಆದ್ರೆ ನಮಗೆ ಉತ್ತರ ನೀಡಲು ಅವಕಾಶ ನೀಡಬೇಕು. ಕಾರಣ ಸಾಮಾನ್ಯ ಜನರಿಗೂ ಸರ್ಕಾರದ ಧ್ವನಿ ತಲುಪಬೇಕಿದೆ. ಬಹುತೇಕ ಎಲ್ಲರೂ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಸದನದ ಸದಸ್ಯರು ಮತ್ತು ಇನ್ನುಳಿದ ಎಲ್ಲರೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಲಸಿಕೆ ನಿಮ್ಮ ‘ಬಾಹು’ (ತೋಳು)ಗಳ ಮೇಲೆ ಹಾಕಿರೋದರಿಂದ ನೀವೆಲ್ಲ ಬಾಹುಬಲಿಗಳು ಆಗುತ್ತೀರಿ. ಈಗಾಗಲೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಸುಮಾರು 40 ಕೋಟಿ ಬಾಹುಬಲಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿತು. ಕೊರೊನಾಗೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಗುಣಮಟ್ಟದ ಚರ್ಚೆ ನಡೆಯಲಿ ಎಂದು ಇಚ್ಛಿಸುತ್ತೇನೆ. ಕೊರೊನಾ ವಿಷಯದಲ್ಲಿ ವಿಪಕ್ಷಗಳು ನೀಡುವ ಸಲಹೆಯನ್ನು ಸ್ವೀಕರಿಸಿ ನಮ್ಮ ಮಹಾಮಾರಿ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುತ್ತೇವೆ.

ನಾನೇ ಸ್ವತಃ ಕೊರೊನಾಗೆ ಸಂಬಂಧಿಸಿದ ಮಾಹಿತಿ ನೀಡಲು ಇಷ್ಟಪಡುತ್ತೇನೆ. ಫ್ಲೋರ್ ಲೀಡರ್ ಜೊತೆ ಮಾತುಕತೆ ನಡೆಯಲಿದೆ. ಈಗಾಗಲೇ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ದೇಶದ ಜನತೆಯ ಪ್ರಶ್ನೆಗಳಿಗೆ ಉತ್ತರ ಸರ್ಕಾರ ಸರ್ವಸನ್ನದ್ಧವಾಗಿದೆ ಎಂದರು.

Comments are closed.