ರಾಷ್ಟ್ರೀಯ

ಮೂಢನಂಬಿಕೆಗೆ ಕೇರಳದಲ್ಲಿ ಆರು ವರ್ಷದ ಹೆತ್ತ ಮಗನನ್ನೇ ಕೊಂದ ತಾಯಿ

Pinterest LinkedIn Tumblr

ಪಾಲಕ್ಕಾಡ್: ಆರು ವರ್ಷದ ಹೆತ್ತ ಮಗುವನ್ನೇ ತಾಯಿಯೊಬ್ಬಳು ದೇವರಿಗೆ ಅರ್ಪಿಸುವ ಉದ್ದೇಶದಿಂದ ಕೊಲೆ ಮಾಡಿರುವ ಘಟನೆ ಕೇರಳದ ಪಾಲಕ್ಕಾಡ್‌ನಲ್ಲಿ ನಡೆದಿದೆ.

ಕೇರಳದ ಪಾಲಕ್ಕಾಡ್‌ನಲ್ಲಿ ತಾಯಿಯೋರ್ವಳು ತನ್ನ ಆರು ವರ್ಷದ ಮಗನನ್ನು ಭೀಕರವಾಆಗಿ ಕೊಲೆ ಮಾಡಿದ್ದಾಳೆ. ತನ್ನ ಮಗನನ್ನು ದೇವರಿಗೆ ಸಮರ್ಪಿಸಲು ಈಕೆ ನಿನ್ನೆ(ಫೆ.07-ಭಾನುವಾರ) ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.

ತನ್ನ ಆರು ವರ್ಷದ ಮಗ ಆಮೀಲ್‌ನನ್ನು ಕೊಲೆ ಮಾಡಿ ಪೊಲೀಸರಿಗೆ ಕರೆ ಮಾಡಿದ ತಾಯಿ ಶಹೀದಾ ಸುಲೇಮಾನ್, ಆಮೀಲ್‌ನನ್ನು ದೇವರಿಗಾಗಿ ತ್ಯಾಗ ಮಾಡಿದ್ದಾಗಿ ಹೇಳಿದ್ದಾಳೆ.

ಆಮೀಲ್‌ನ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಆಮೇಲೆ ಹರಿತವಾದ ಚಾಕುವಿನಿಂದ ಆತನ ಕತ್ತು ಸೀಳಿ ಶಹೀದಾ ಕೊಲೆ ಮಾಡಿದ್ದಾಳೆ. ಶಹೀದಾ ಪತಿ ಸುಲೇಮಾನ್ ವೃತ್ತಿಯಿಂದ ಟ್ಯಾಕ್ಸಿ ಚಾಲಜಕನಾಗಿದ್ದು, ಕೊಲೆ ನಡೆದಾಗ ಆತ ಇತರ ಇಬ್ಬರು ಮಕ್ಕಳೊಂದಿಗೆ ಬೇರೊಂದು ಕೋಣೆಯಲ್ಲಿ ಮಲಗಿದ್ದ ಎನ್ನಲಾಗಿದೆ.

ಇನ್ನು ಶಹೀದಾ ಗರ್ಭವತಿಯಾಗಿದ್ದು, ತನ್ನ ಮಕ್ಕಳಲ್ಲಿ ಓರ್ವನನ್ನು ದೇವರನ್ನು ಸಂತುಷ್ಟಗೊಳಿಸಲು ಕೊಲೆ ಮಾಡಲು ಯೋಜನೆ ರೂಪಿಸಿ ಅದರಂತೆ ಆಮೀಲ್‌ನನ್ನು ಬಲಿ ಕೊಟ್ಟಿದ್ದಾಳೆ.

ಸದ್ಯ ಮಗ ಆಮೀಲ್ ಕೊಲೆ ಆರೋಪದ ಮೇಲೆ ತಾಯಿ ಶಹೀದಾಳನ್ನು ಬಂಧಿಸಿರುವ ಪೊಲೀಸರು, ಆಕೆಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.