ಕರಾವಳಿ

“ಆಧುನಿಕ ರಾಜಕೀಯ ವ್ಯವಸ್ಥೆಗಳು” ಹಾಗು “ಕರ್ನಾಟಕ ರಾಜಕೀಯ” ಪುಸ್ತಕ ಬಿಡುಗಡೆ

Pinterest LinkedIn Tumblr

ಮಂಗಳೂರು : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಆಶ್ರಯದಲ್ಲಿ ಡಾ.ಎಸ್.ಪದ್ಮನಾಭ ಭಟ್ ಎಕ್ಕಾರು ಅವರು ಮಂಗಳೂರು ವಿಶ್ವವಿದ್ಯಾಲಯದ ಪಠ್ಯಕ್ಕೆ ಅನುಸಾರವಾಗಿ ಕನ್ನಡ ಮಾಧ್ಯಮದಲ್ಲಿ ಬರೆಯುವ ಬಿ.ಎ.ವಿದ್ಯಾರ್ಥಿಗಳಿಗಾಗಿ ರಚಿಸಿದ”ಆಧುನಿಕ ರಾಜಕೀಯ ವ್ಯವಸ್ಥೆಗಳು” ಎಂಬ ಪಠ್ಯಪುಸ್ತಕ ಮತ್ತು “ಕರ್ನಾಟಕ ರಾಜಕೀಯ”ಎಂಬ ಉಪಪಠ್ಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಆಧುನಿಕ ರಾಜಕೀಯ ವ್ಯವಸ್ಥೆಗಳು ಎಂಬ ಪುಸ್ತಕವನ್ನು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಬಿಡುಗಡೆಗೊಳಿಸಿ ಶುಭಹಾರೈಸಿದರು.ಕರ್ನಾಟಕ ರಾಜಕೀಯ ಎಂಬ ಉಪಪಠ್ಯವನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಬಿಡುಗಡೆಗೊಳಿಸಿದರು.

ಉನ್ನತ ಶಿಕ್ಷಣ ಮತ್ತು ರಾಜ್ಯ ಹಾಗು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ, ಕನ್ನಡ ಮಾಧ್ಯಮದಲ್ಲಿ ಬರೆಯುವ ಅವಕಾಶ ಇದ್ದರೂ ಸರಿಯಾದ ಕನ್ನಡ ಮಾಧ್ಯಮದ ಪುಸ್ತಕಗಳು ಲಭ್ಯವಿಲ್ಲ. ಈ ನಿಟ್ಟಿನಲ್ಲಿ ಡಾ.ಎಸ್.ಪದ್ಮನಾಭ ಭಟ್ಟರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ಜೈ ಭಾರತ ಪ್ರಕಾಶನ,ಮಂಗಳೂರು ಇದರ ಪ್ರಕಾಶಕ ಹಾಗು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಇದರ ಸದಸ್ಯರಾಗಿ ಆಯ್ಕೆಯಾದ ಚ.ನ.ಶಂಕರ ರಾವ್ ಅವರನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಉಪಸ್ಥಿತರಿದ್ದರು, ಪಠ್ಯಪುಸ್ತಕ ದ ಕರ್ತ ಡಾ.ಎಸ್. ಪದ್ಮನಾಭ ಭಟ್ ಸ್ವಾಗತಿಸಿ ವಂದಿಸಿದರು.

Comments are closed.