ರಾಷ್ಟ್ರೀಯ

ಆನ್‍ಲೈನ್ ಗೇಮ್ ಹುಚ್ಚಿಗೆ ಮತ್ತೊಂದು ಬಲಿ; 16 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ

Pinterest LinkedIn Tumblr

ಹೈದರಾಬಾದ್: ಆನ್‍ಲೈನ್ ಗೇಮ್ ಹುಚ್ಚು ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಮಧ್ಯೆ 16 ಲಕ್ಷ ರೂ. ಕಳೆದುಕೊಂಡು ವ್ಯಕ್ತಿಯೊಬ್ಬ ಅದನ್ನು ತೀರಿಸಲಾಗದೆ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಲಕ್ಷಾಂತರ ರೂಪಾಯಿ ಕಳೆದುಕೊಂಡ ಜಗದೀಶ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತ ಎಲ್‍ಬಿ ನಗರ ನಿವಾಸಿ. ಆನ್‍ಲೈನ್ ಗೇಮ್ ಚಟದಿಂದಾಗಿ ಜಗದೀಶ್ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡನು. ಅಲ್ಲದೆ ಸಾಲ ತೀರಿಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೆಲವು ದಿನಗಳ ಹಿಂದೆ ಜಗದೀಶ್ ತಂದೆ 16 ಲಕ್ಷ ರೂ. ಸಾಲ ತೀರಿಸಿದ್ದರು. ಆದರೆ ಈತ ಮತ್ತೆ ಆನ್‍ಲೈನ್ ಆಟಗಳನ್ನು ಆಡಲು ಪ್ರಾರಂಭಿಸಿದ. ಇದರೊಂದಿಗೆ ಜಗದೀಶ್ ಸಂಪೂರ್ಣವಾಗಿ ಭಾರೀ ಸಾಲದ ಸುಳಿಯಲ್ಲಿ ಸಿಲುಕಿಕೊಂಡ. ಇದರಿಂದ ಖಿನ್ನತೆಗೊಳಗಾಗಿ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋದಲ್ಲಿ ಜಗದೀಶ್ ಆತ್ಮಹತ್ಯೆಗೆ ಕಾರಣಗಳನ್ನು ತಿಳಿಸಿದ್ದಾನೆ. ಈ ಸಂಬಂಧ ಜಗದೀಶ್ ಪೋಷಕರು ನೀಡಿರುವ ದೂರು ಸ್ವೀಕರಿಸಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Comments are closed.