ರಾಷ್ಟ್ರೀಯ

ದೇಶ ಕಾಯುವ ವೀರ ಯೋಧರ ಜೊತೆ ದೀಪಾವಳಿ ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ರಾಜಸ್ತಾನ‌(ಜೈಸಲ್ಮೇರ್): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ ಈ ವರ್ಷವೂ ಕೂಡ ನಮ್ಮ ದೇಶ ಕಾಯುವ ವೀರ ಯೋಧರ ಜೊತೆ ದೀಪಾವಳಿ ಆಚರಿಸಿಕೊಂಡಿದ್ದಾರೆ.

ರಾಜಸ್ತಾನದ ಜೈಸಲ್ಮೇರ್ ಲಾಂಗ್ ವಾಲಾ ಗಡಿ ಪ್ರದೇಶದಲ್ಲಿ ಬಿಎಸ್‍ಎಫ್ ಯೋಧರಿಗೆ ಮೋದಿ ಸಿಹಿ ತಿನಿಸಿ ಉಡುಗೊರೆಗಳನ್ನು ನೀಡಿ ದೀಪಾವಳಿ ಆಚರಿಸಿಕೊಂಡರು.

ಭಾರತೀಯ ಸಶಸ್ತ್ರ ಪಡೆಗಳ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್ , ಭೂ ಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮತ್ತು ಬಿಎಸ್‍ಎಫ್ ಮಹಾ ನಿರ್ದೇಶಕ ರಾಜೇಶ್ ರಾಕೇಶ್ ಆಸ್ತಾನ ಅವರು ಮೋದಿ ಜೊತೆಗಿದ್ದರು. 2014 ರಿಂದಲೂ ಮೋದಿ ಅವರು ಪ್ರತಿ ದೀಪಾವಳಿಯನ್ನು ಯೋಧರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಬಾರಿ ಪ್ರಧಾನಿ ಮೋದಿಯವರಿದ್ದ ವಾಯುಪಡೆಯ ವಿಶೇಷ ವಿಮಾನ ಶನಿವಾರ ಬೆಳಿಗ್ಗೆ 9:15ಕ್ಕೆ ಜೈಸಲ್ಮೇರ್ ವಾಯುಪಡೆಯ ವಿಮಾನ ನಿಲ್ದಾಣದಲ್ಲಿ ತಲುಪಿತು.

ರಾಜಸ್ಥಾನದ ಲಾಂಗ್‌ವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಮಿಲಿಟರಿ ಕೌಶಲ್ಯದ ಇತಿಹಾಸವನ್ನು ಬರೆದಾಗಲೆಲ್ಲಾ ಲಾಂಗ್‌ವಾಲಾ ಕದನವನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದು ಸೈನ್ಯದ ಕಾರ್ಯವನ್ನು ಕೊಂಡಾಡಿದರು.

Comments are closed.