ಕರ್ನಾಟಕ

‘ಆ ಯಮ್ಮಾ ಕೆಲಸ ಮಾಡಲ್ಲ’- ಸಂಸದೆ ಸುಮಲತಾ ಬಗ್ಗೆ ಠೀಕಿಸಿದ ಪ್ರತಾಪ್ ಸಿಂಹ ವಿಡಿಯೋ ವೈರಲ್- ವ್ಯಾಪಕ ಚರ್ಚೆ..!

Pinterest LinkedIn Tumblr

ಮೈಸೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಮೈಸೂರು ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು ಮಂಡ್ಯ ಸಂಸದೆ ಸುಮಲತಾ ವಿರುದ್ಧ ‘ಆ ಯಮ್ಮಾ ಏನೂ ಕೆಲಸ ಮಾಡಲ್ಲ’ ಎಂದು ಗಂಭೀರ ಆರೋಪ ಮಾಡಿದ ವಿಡಿಯೋ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಗೂ ಗ್ರಾಸವಾಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಅಧಿಕಾರಿಯೊಬ್ಬರ ಜೊತೆ ಫೋನ್‌ನಲ್ಲಿ ಮಾತನಾಡುತ್ತಾ, ದೇವೇಗೌಡರ ಕುಟುಂಬದವರನ್ನು ಸೋಲಿಸಲು ಸುಮಲತಾ ಅವರನ್ನು ಗೆಲ್ಲಿಸಿದ್ದಾರಷ್ಟೇ. ಮಂಡ್ಯದಲ್ಲಿ ಒಂದು ಕೆಲಸ ಮಾಡುವುದಕ್ಕೂ ಬಿಡುತ್ತಿಲ್ಲ. ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮಾ ಏನೂ ಕೆಲಸ ಮಾಡುವುದಿಲ್ಲ ಎಂದು ಅಧಿಕಾರಿಯ ಜೊತೆ ಮಾತನಾಡುತ್ತಾ ಟೀಕಿಸಿದ ವಿಡಿಯೋ ವೈರಲ್ ಆಗಿದೆ.

ಸದ್ಯ ಪ್ರತಾಪ್‌ ಸಿಂಹ ಸುಮಲತಾ ವಿರುದ್ಧ ಆ ಯಮ್ಮಾ ಕೆಲಸ ಮಾಡಲ್ಲ ಎಂದು ಆರೋಪಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೆ ಸುಮಲತಾ ಬೆಂಬಲಿಗರು ಹಾಗೂ ಅಂಬರೀಶ್ ಅಭಿಮಾನಿಗಳು ಪ್ರತಾಪ್‌ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಮತ್ತಷ್ಟು ಮಂದಿ ಪ್ರತಾಪ್‌ ಸಿಂಹ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಮೆಂಟ್ ಮಾಡ್ತಿದ್ದಾರೆ.

 

 

Comments are closed.