ರಾಷ್ಟ್ರೀಯ

ಮಾರ್ಚ್‌ ತ್ರೈಮಾಸಿಕದಲ್ಲಿ ಪಾತಾಳಕ್ಕೆ ಕುಸಿದ ದೇಶದ ಆರ್ಥಿಕ ದರ

Pinterest LinkedIn Tumblr


ನವ ದೆಹಲಿ (ಮೇ 29); ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಲಾಕ್ಡೌನ್ನಿಂದಾಗಿ ಈಗಾಗಲೇ ಗ್ರಾಹಕರ ಬೇಡಿಕೆ ಮತ್ತು ಖಾಸಗಿ ಹೂಡಿಕೆ ಕ್ಷೀಣಿಸಿದ್ದು ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಕಳೆದ ಎರಡು ವರ್ಷಗಳಲ್ಲೇ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ ಎಂದು ಶುಕ್ರವಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ.

ರಾಯಿಟರ್ಸ್ ಅರ್ಥಶಾಸ್ತ್ರ ಸಮೀಕ್ಷೆ ಭಾರತೀಯ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಸರಾಸರಿ ಮುನ್ಸೂಚನೆ ನಿಡಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ವಾರ್ಷಿಕ ಆರ್ಥಿಕ ಬೆಳವಣಿಯನ್ನು ಶೇ 2.1 ಕ್ಕೆ ಇಳಿಸಿದೆ. ಇದು ಡಿಸೆಂಬರ್ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಜಿಡಿಪಿ ಶೇ 4.7 ಗಿಂತ ಕಡಿಮೆಯಾಗಿದೆ. ಅಲ್ಲದೆ, ಈ ದರ ಶೇ.1.5ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದೂ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಕೊರೋನಾ ವೈರಸ್ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ದೇಶದ ಪ್ರಧಾನ ಮಂತ್ರಿ ಮಾರ್ಚ್.25 ರಿಂದ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದರು. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾದ ಭಾರತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿಯೂ ಕೊರೋನಾವನ್ನು ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಮೇ.18ರಿಂದ ದೇಶದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಅನ್ನು ಸಡಿಲಿಸಲಾಗುತ್ತಿದೆ.

ಆದರೆ, ಉತ್ಪಾದನೆ ಮತ್ತು ಸೇವೆಗಳ ಮೇಲಿನ ಲಾಕ್‌ಡೌನ್ ಸಂಪೂರ್ಣ ಪರಿಣಾಮವು ಜೂನ್ ತ್ರೈಮಾಸಿಕದಲ್ಲಿ ಹೆಚ್ಚು ಸ್ಪಷ್ಟವಾಗಲಿದೆ. ಕಳೆದ ವರ್ಷದ ಆರ್ಥಿಕ ದರಕ್ಕೆ ಹೋಲಿಕೆ ಮಾಡಿದರೆ ಶೇ.45ರಷ್ಟು ಕಡಿಮೆಯಾಗಲಿದೆ. ಇನ್ನೂ ಏಪ್ರಿಲ್‌ನಲ್ಲಿ ಪ್ರಾರಂಭವಾದ ಆರ್ಥಿಕ ವರ್ಷವು ನಾಲ್ಕು ದಶಕಗಳಲ್ಲಿ ಕೆಟ್ಟ ಆರ್ಥಿಕ ಸಂಕೋಚನವನ್ನು ಕಾಣಲಿದೆ ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ.

ಕೋವಿಡ್ -19 ರ ನಂತರದ ದಿನಗಳಲ್ಲಿ ದೇಶಕ್ಕೆ ದೇಶವೇ ಪರಿವರ್ತನೆಗೊಳ್ಳುವುದರಿಂದ ಮುಂದಿನ ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳು ನಿರಂತರ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. 2020-21ರ ಅವಧಿಯಲ್ಲಿ ದೇಶದ ಆರ್ಥಿಕತೆ ಶೇ.5 ರಷ್ಟಿರಲಿದೆ ಎಂದು “ಎಸ್ ಅಂಡ್ ಪಿ” ರೇಟಿಂಗ್ ಎಜೆನ್ಸಿ ಈಗಾಗಲೇ ಅಂದಾಜಿಸಿದೆ.

ಸಾಮಾನ್ಯವಾಗಿ ಮುಂಗಾರು ಮಳೆಯ ಹವಾಮಾನ ಮುನ್ಸೂಚನೆಗಳು ಕನಿಷ್ಠ ಭಾರತೀಯ ರೈತರ ಪರವಾಗಿರುತ್ತವೆ. ಲಾಕ್‌ಡೌನ್ ಪ್ರಾರಂಭವಾದ ನಂತರ ಲಕ್ಷಾಂತರ ಜನ ನಗರಗಳನ್ನು ತೊರೆದು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಹೀಗಾಗಿ ಈ ಲಕ್ಷಾಂತರ ವಲಸೆ ಕಾರ್ಮಿಕರನ್ನು ಬೆಂಬಲಿಸಲು ಗ್ರಾಮೀಣ ವಲಯವು ಸಹಾಯ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ ಎಂದು ಅರ್ಥಶಾಸ್ತ್ರಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಭಾರತದಲ್ಲಿ ಈಗಾಗಲೇ ಕರೋನಾ ವೈರಸ್ ಪೀಡಿತ ಸಂಖ್ಯೆ 1.6 ಲಕ್ಷ ದಾಟಿದ್ದು, ಚಿಕಿತ್ಸೆ ಫಲಕಾರಿಯಾಗದೆ 4,531 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Comments are closed.