ರಾಷ್ಟ್ರೀಯ

ದಿಲ್ಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಶವಾಗಾರ ಭರ್ತಿಯಾಗಿ ಎಲ್ಲೆಂದರಲ್ಲಿ ಕೊಳೆಯುತ್ತಿವೆ ಮೃತದೇಹ!

Pinterest LinkedIn Tumblr


ಹೊಸ ದಿಲ್ಲಿ: ಇಲ್ಲಿನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಶವಾಗಾರ ಭರ್ತಿಯಾಗಿ ಹೋಗಿದೆ. ಒಂದೆಡೆ ಕೊರೊನಾ ವೈರಸ್ ಹಾವಳಿ, ಮತ್ತೊಂದೆಡೆ ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಂದ ಮೃತಪಡುವ ಜನರ ಸಂಖ್ಯೆ ಹೆಚ್ಚಾಗಿದ್ದು, ಶವಾಗಾರಗಳಲ್ಲಿ ಜಾಗವಿಲ್ಲದೆ ಎಲ್ಲೆಂದರಲ್ಲಿ ಶವಗಳನ್ನು ಪೇರಿಸಿಡುತ್ತಿರುವ ಆತಂಕಕಾರಿ ದೃಶ್ಯ ಬಯಲಾಗಿದೆ.

ದಿಲ್ಲಿಯ ಬಹುತೇಕ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಶವಗಳನ್ನು ಸ್ವೀಕರಿಸುತ್ತಿಲ್ಲ. ಕೊರೊನಾ ವೈರಸ್ ಭೀತಿಯಿಂದಾಗಿ ಸ್ವಶಾನ ಮೇಲ್ವಿಚಾರಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಆಸ್ಪತ್ರೆಯ ಶವಾಗಾರಗಳಲ್ಲಿ ಜಾಗವೇ ಸಾಕಾಗದಂಥಾ ಸನ್ನಿವೇಶ ಎದುರಾಗಿದೆ.

ದಿಲ್ಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ನೂರಾರು ಶವಗಳನ್ನು ಪೇರಿಸಿ ಇಡಲಾಗಿದೆ. ಮೂಲಗಳ ಪ್ರಕಾರ, ಈ ಆಸ್ಪತ್ರೆಯಲ್ಲಿ ಕೇವಲ 40 ಶವಗಳನ್ನು ಮಾತ್ರ ಇರಿಸಬಹುದಾಗಿದೆ. ಆದ್ರೆ, ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಕಾರಣ, ಬಹುತೇಕ ಶವಗಳು ಆಸ್ಪತ್ರೆಯ ಶವಾಗಾರದಲ್ಲೇ ಉಳಿಯುತ್ತಿವೆ.

ಇನ್ನೊಂದಡೆ ದಿಲ್ಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳೂ ದಿನವೊಂದಕ್ಕೆ ಸಾವಿರಗಟ್ಟಲೆ ವರದಿಯಾಗುತ್ತಿವೆ. ಈವರೆಗೆ ದಿಲ್ಲಿಯಲ್ಲಿ 398 ಮಂದಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಈ ನಡುವೆ, ದಿಲ್ಲಿ ಜನರಿಗೆ ಸಾಂತ್ವನದ ಮಾತುಗಳನ್ನಾಡಿರುವ ದಿಲ್ಲಿ ಡಿಸಿಎಂ ಮನೀಷ್‌ ಸಿಸೋಡಿಯಾ, ಸೋಂಕು ಗಂಭೀರ ಸ್ವರೂಪದಲ್ಲಿ ಹರಡುತ್ತಿಲ್ಲ ಎಂದು ಹೇಳಿದ್ದಾರೆ.

Comments are closed.